ಬೆಂಗಳೂರು: ಸಿಎಂಗೆ ಸ್ವಾಭಿಮಾನ ಇದ್ದಿದ್ದರೆ ಈ ಬಚ್ಚಲು ಬಾಯಿಯ ಈಶ್ವರಪ್ಪರನ್ನು ವಜಾ ಮಾಡಬೇಕಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದರು.
ಯಾವ ಪಕ್ಷದವರು ಯಾವ ರೀತಿ ಮಾತನಾಡುತ್ತಿದ್ದಾರೆ ಎಂದು ಜನರು ಗಮನಿಸುತ್ತಿದ್ದಾರೆ. ನಿನ್ನೆ ಖರ್ಗೆಯವರು ಬಂದು ಬೆಂಬಲ ಕೊಟ್ಟರು. ಬೇರೆ ರಾಜ್ಯಗಳಿಂದಲೂ ಕರೆ ಬರುತ್ತಿವೆ. ಕರ್ನಾಟಕದ ಕಾಂಗ್ರೆಸ್ ಶಾಸಕರು ಒಳ್ಳೇ ಕೆಲಸ ಮಾಡ್ತಿದ್ದಾರೆ. ಧರಣಿ ಮಾಡುತ್ತಿರುವುದು ಒಳ್ಳೆಯದು ಎಂದು ಬೇರೆ ರಾಜ್ಯಗಳ ರಾಜಕಾರಣಿಗಳು ಹೇಳುತ್ತಿದ್ದಾರೆ ಎಂದು ಖರ್ಗೆ ಹೇಳಿದರು. ಈಶ್ವರಪ್ಪ ಹೇಳಿಕೆಗೆ ಎಲ್ಲೆಡೆ ವಿರೋಧ ಬರುತ್ತಿದೆ ಎಂದರು.
ಸಿಂಗಾಪುರ ಪಿಎಂ ಕೇಂದ್ರ ಸರ್ಕಾರದ ಬಗ್ಗೆ ಮಾತಾಡಿದ್ದಾರೆ. ಬೇರೆ ಬೇರೆ ದೇಶಗಳಿಂದ ಕೇಂದ್ರದ ನಡೆ ಬಗ್ಗೆ ಟೀಕೆ ಬರುತ್ತಿದೆ. ಈಶ್ವರಪ್ಪ ಹೇಳಿಕೆ ವೈಯಕ್ತಿಕ ಅಲ್ಲ. ನಮ್ಮ ಹೋರಾಟ ಮುಂದುವರೆಯಲಿದೆ. ನಮ್ಮ ಹೋರಾಟ ನಿಲ್ಲಲ್ಲ ಎಂದು ಹೇಳಿದರು.