ಕೋಲಾರ: ಗ್ರಾಮದ ಮುಖಂಡ ಊರಿನಲ್ಲಿ ಯಾವುದೇ ಸಮಸ್ಯೆಗಳಾದರೂ ಮುಂದೆ ನಿಂತು ಕೈಲಾದ ಸಹಾಯ ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಮುಖಂಡ ಯಾವುದೇ ಸಮಸ್ಯೆ ಬಂದ್ರೂ ಮುಂದೆ ನಿಂತು ರಾಜಿ ಪಂಚಾಯ್ತಿ ಮಾಡಿಸುತ್ತಿದ್ದರು. ಆದರೆ ಅವರ ಒಳ್ಳೆಯ ಕೆಲಸಗಳೇ ಅವನಿಗೆ ಮುಳುವಾಗಿ ಬಿಟ್ಟಿತ್ತು. ಯಾರದೋ ಸಮಸ್ಯೆ ಬಗೆಹರಿಸಲು ಹೋಗಿ ತಾನೇ ಬಲಿಯಾಗಿದ್ದಾರೆ.
ಶವದ ಮುಂದೆ ಗೋಳಿಡುತ್ತಿರುವ ಸಂಬಂಧಿಕರು. ಸಾವಿನ ಮನೆಯ ಸುತ್ತಲೂ ಸೇರಿರುವ ಸಾವಿರಾರು ಜನ, ಪೊಲೀಸರಿಂದ ಬಿಗಿ ಬಂದೋಬಸ್ತ್. ಮೃತರ ಅಂತಿಮ ದರ್ಶನಕ್ಕೆ ಬಂದಿರುವ ಮುಖಂಡರುಗಳು ಇದೆಲ್ಲಾ ದೃಶ್ಯಗಳು ಕಂಡುಬಂದಿದ್ದು, ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ತಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
Laxmi News 24×7