ಮೈಸೂರು: ಒಂದು ಕಡೆ ಕಾಂಗ್ರೆಸ್ ಮತ ಬ್ಯಾಂಕ್ ಲೆಕ್ಕ, ಇನ್ನೊಂದು ಕಡೆ ಬಿಜೆಪಿಯ ಕೆಲವರ ಧರ್ಮಾಂಧತೆಯಿಂದ ಶಿಕ್ಷಣ ವ್ಯವಸ್ಥೆ ಕೆಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣಕ್ಕಿಂತ ಹಿಜಬ್ ಮುಖ್ಯ ಎಂದು ಒಬ್ಬ ವಿದ್ಯಾರ್ಥಿನಿ ಹೇಳುತ್ತಾಳೆ. ವಿದ್ಯಾರ್ಥಿನಿಯನ್ನು ಆ ರೀತಿ ಮಾತಾಡುವಂತೆ ಕಾಂಗ್ರೆಸ್ ಟ್ಯೂನ್ ಮಾಡುತ್ತಿದೆ. ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್‍ಗಾಗಿ ಮನಸ್ಸು ಕೆಡಿಸುತ್ತಿದೆ. ಶಿಕ್ಷಣಕ್ಕಿಂತ ಹಿಜಬ್ ಮುಖ್ಯ ಎಂದು ಕಾಂಗ್ರೆಸ್ ಮಕ್ಕಳಿಗೆ ಹೇಳಿ ಕೊಡುತ್ತಿದೆ. ಇದು ದುರಂತವಾಗಿದೆ. ಒಟ್ಟಿನಲ್ಲಿ ಹಿಜಾಬ್ ವಿಚಾರದಿಂದ ಇಡೀ ವ್ಯವಸ್ಥೆ ಹಾಳಾಗುತ್ತಿದೆ. ಇದು ತಿಳಿಯಾಗಬೇಕು. ಕೋರ್ಟ್ ಆದೇಶ ಪಾಲನೆ ಆಗಬೇಕು ಎಂದು ಒತ್ತಾಯಿಸಿದರು.