Breaking News

ಚಾಲಕನೊಬ್ಬ ತನ್ನದೇ ಲಾರಿಯ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದ ಶಾಕಿಂಗ್​ ಘಟನೆ ಬಯಲಾಗಿದೆ..

Spread the love

ಕೊಯಮತ್ತೂರು(ತಮಿಳುನಾಡು): ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ನಡೆದ ಅಪಘಾತದ ಸಿಸಿಟಿವಿ ದೃಶ್ಯವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಚಾಲಕನೊಬ್ಬ ತನ್ನದೇ ಲಾರಿಯ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದ ಶಾಕಿಂಗ್​ ಘಟನೆ ಬಯಲಾಗಿದೆ.

ಸೇಲಂ ನಿವಾಸಿಯಾದ ಲಾರಿ ಚಾಲಕ ಸುರೇಶ್ ಬಾಬು ಎಂಬಾತ ಮೃತ ದುರ್ದೈವಿ. ನಿನ್ನೆ (ಫೆ.17) ಚಾಲಕ ಸುರೇಶ್​ ಬಾಬು ಸೇಲಂನಿಂದ ಕೊಯಮತ್ತೂರಿಗೆ ಲಾರಿಯಲ್ಲಿ ಸರಕುಗಳನ್ನು ಸಾಗಿಸುತ್ತಿದ್ದರು.

ತನ್ನದೇ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದ ಚಾಲಕಈ ವೇಳೆ, ಕೊಯಮತ್ತೂರು ಸಮೀಪದ ಕರುಮಂಥಂಪಟ್ಟಿ ಎಂಬಲ್ಲಿ ಮೂತ್ರ ವಿಸರ್ಜನೆಗೆಂದು ಲಾರಿ ನಿಲ್ಲಿಸಿದ್ದಾರೆ. ಆದರೆ, ಸುರೇಶ್​ ಬಾಬು ಲಾರಿಯ ಎಂಜಿನ್​ ಆಫ್​ ಮಾಡಿರಲಿಲ್ಲ. ಲಾರಿ ಮುಂದೆ ನಿಂತು ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ, ಲಾರಿ ಇದ್ದಕ್ಕಿದ್ದಂತೆ ಚಲಿಸಲು ಶುರು ಮಾಡಿದೆ.

ಇದನ್ನು ಕಂಡು ಗಾಬರಿಗೊಂಡ ಸುರೇಶ್​ ಲಾರಿಯನ್ನು ತನ್ನ ಕೈಯಿಂದ ನಿಲ್ಲಿಸಲು ಯತ್ನಿಸಿದಾಗ ಲಾರಿ ಆತನ ಮೇಲೆ ಹರಿದಿದ್ದು, ಸ್ಥಳದಲ್ಲೇ ಪ್ರಾಣ ತೆತ್ತಿದ್ದಾನೆ. 


Spread the love

About Laxminews 24x7

Check Also

ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಕಡ್ಡಾಯಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Spread the loveಧಾರವಾಡ: ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ಸಂಸ್ಥೆಗಳ ಅನುಮತಿ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಧಾರವಾಡ ಹೈಕೋರ್ಟ್ ಏಕ ಸದಸ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ