Breaking News

k.p.s.c. ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿ ವಿಧಾನ ಬದಲಾವಣೆ ಆಗಿದ್ದು, ನೇಮಕಾತಿ ಅಂಕಗಳನ್ನು ಇಳಿಕೆ ಮಾಡಲಾಗಿದೆ.

Spread the love

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ( Karnataka Public Service Commission ) ಹುದ್ದೆಗಳ ನೇಮಕಾತಿ ( Recruitment ) ಸಂದರ್ಭದಲ್ಲಿನ ಪರೀಕ್ಷೆಯಲ್ಲಿ ( Exam ) ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್ ( ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ) ( ತಿದ್ದುಪಡಿ ) ನಿಯಮ 2022ಕ್ಕೆ ತಿದ್ದುಪಡಿ ತರಲಾಗಿದೆ.

ಈ ತಿದ್ದುಪಡಿಯಂತೆ ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಾತಿ ವಿಧಾನ ಬದಲಾವಣೆ ಆಗಿದ್ದು, ನೇಮಕಾತಿ ಅಂಕಗಳನ್ನು ಇಳಿಕೆ ಮಾಡಲಾಗಿದೆ.

ಈ ಸಂಬಂಧ ಶುಕ್ರವಾರದಂದು ಅಧಿವೇಶನದಲ್ಲಿ ಸರ್ಕಾರದಿಂದ ಕೆಪಿಎಸ್ಸಿ ತಿದ್ದುಪಡಿ ಮಸೂದೆ ಮಂಡನೆಯನ್ನು ರಾಜ್ಯ ಸರ್ಕಾರ ಮಾಡಿದೆ. ಈ ತಿದ್ದುಪಡಿ ಮಸೂದೆಯಂತೆ ಮುಖ್ಯ ಪರೀಕ್ಷೆಯ ಎರಡು ಐಚ್ಛಿಕ ವಿಷಯಗಳನ್ನು ಕೈಬಿಡಲು ನಿರ್ಧರಿಸಲಾಗಿದ್ದು, ಪೂರ್ವಭಾವಿ ಪರೀಕ್ಷೆಯ 400 ಅಂಕಗಳ ಪತ್ರಿಕೆ ಮುಂದುವರೆಸಿದೆ.

ಎರಡು ಐಚ್ಛಿಕ ಪರೀಕ್ಷೆ ಕೈ ಬಿಟ್ಟಿರುವ ಕಾರಣ, ಒಟ್ಟು ಅಂಕಗಳನ್ನು 1750ರಿಂದ 1250ಕ್ಕೆ ಇಳಿಕೆ ಆಗಿದೆ. ಇದಲ್ಲದೇ 200 ಅಂಕಗಳಿಗೆ ನಡೆಯುತ್ತಿದ್ದಂತ ವ್ಯಕ್ತಿತ್ವ ಪರೀಕ್ಷೆಯ ಅಂಕ 50ಕ್ಕೆ ಇಳಿಸಲಾಗಿತ್ತು. ಈ ಅಂಕವನ್ನು 50 ರಿಂದ 25ಕ್ಕೆ ಇಳಿಸಲಾಗಿದೆ. ಇನ್ಮುಂದೆ 25 ಅಂಕಗಳಿಗೆ ಮಾತ್ರವೇ ಸಂದರ್ಶನ ನಡೆಯಲಿದೆ.


Spread the love

About Laxminews 24x7

Check Also

ಚೇರಿಯಲ್ಲಿ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಅವರನ್ನು ಭೇಟಿಯಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ, ಪ್ರಮುಖವಾಗಿ ಪಕ್ಷದ ಸಂಘಟನೆ ವಿಷಯದಲ್ಲಿ ಚರ್ಚೆ

Spread the loveಬೆಂಗಳೂರು, ಜುಲೈ 7: ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಅವರನ್ನು ಭೇಟಿಯಾದ ನಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ