ಬೆಂಗಳೂರು: ಕಾಂಗ್ರೆಸ್ ಅಹೋರಾತ್ರಿ ಧರಣಿಯಲ್ಲಿ ಕಾಂಗ್ರೆಸ್ ನಾಯಕರ ನಡುವೆ ಚಿಂತನ ಮಂಥನ ನಡೆದಿದೆ. ರಾತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಶಾಸಕರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಈ ವೇಳೆ ಶಾಸಕರು ಕೂಡಾ ಇಬ್ಬರೂ ನಾಯಕರಿಗೆ ನೀವಿಬ್ಬರೂ ಜೊತೆಯಾಗಿದ್ದರೆ ಚುನಾವಣೆ ಗೆಲ್ಲಬಹುದು ಅಂತಾ ಹೇಳಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಮತದಾರನ ಮನೆ ಬಾಗಿಲಿಗೆ ಹೋಗಿ.. ನಿನ್ನೆ ರಾತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್, ಚುನಾವಣೆಗೆ ಇನ್ನೊಂದು ವರ್ಷ ಮಾತ್ರ ಬಾಕಿಯಿದೆ. ಚುನಾವಣೆಗೆ ಇಂದಿನಿಂದಲೇ ಸಿದ್ಧತೆ ಶುರು ಮಾಡಿ. ಸರ್ಕಾರದ ಅನುದಾನ ತಾರತಮ್ಯ, ಈಶ್ವರಪ್ಪ ಕಾಂಟ್ರೋವರ್ಸಿ ಹೇಳಿಕೆ, ಕೋವಿಡ್ ಸಂದರ್ಭದಲ್ಲಿ ಸರ್ಕಾರ ನಡೆದುಕೊಂಡಿದ್ದನ್ನು ಜನರ ಗಮನಕ್ಕೆ ತನ್ನಿ. ಜನರು ನಿಮ್ಮ ಬಳಿ ಬರುವ ಸಮಯ ಮುಗಿದಿದೆ. ನೀವೇ ಜನರ ಬಳಿ ಹೋಗಬೇಕು. ನಮ್ಮ ಐದು ವರ್ಷಗಳ ಕಾಲ ಆಡಳಿತವನ್ನು ಜನರ ಗಮನಕ್ಕೆ ತನ್ನಿ. ಕ್ಷೇತ್ರ ಬಿಡಬೇಡಿ ಇನ್ನೊಂದು ವರ್ಷ ಕ್ಷೇತ್ರದಲ್ಲಿ ಸಂಚಾರ ಮಾಡಿ. ಮತದಾರನ ಮನೆ ಬಾಗಿಲಿಗೆ ನೀವು ಹೋಗಿ ಎಂದು ಸೂಚನೆ ನೀಡಿದ್ದಾರೆ