ಪುಷ್ಪ ಸಕ್ಸಸ್ ನಂತರ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಹೀರೋ ಆಗ್ಬಿಟ್ರು. ಪ್ಯಾನ್ ಇಂಡಿಯಾ ಪಟ್ಟ ಏನೋ ಪಡೆದುಕೊಂಡ್ರು. ಆದರೆ, ಪುಷ್ಪ ಮಾಡೋದಕ್ಕೂ ಮುಂಚೆ ಐದು ಬಿಗ್ ಪ್ರಾಜೆಕ್ಟ್ಗಳನ್ನು ಸ್ಟೈಲಿಶ್ ಸ್ಟಾರ್ ‘‘ಇದಿ ವದ್ದು’’ ಅಂತ ಕೈಬಿಟ್ಟಿದ್ದರಂತೆ. ಅವುಗಳಲ್ಲಿ 3 ಚಿತ್ರ ಮೆಗಾ ಹಿಟ್ ಆಗೋಯ್ತು. ಅಷ್ಟಕ್ಕೂ, ಅಲ್ಲು ಅರ್ಜುನ್ ದೂರ ಮಾಡಿಕೊಂಡ ಆ ಸಿನಿಮಾಗಳು ಯಾವುದು?
ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಸೂಪರ್ ಡೂಪರ್ ಹಿಟ್ ಆಯ್ತು. ಬಾಕ್ಸ್ ಫೀಸ್ನಲ್ಲೂ ಭರ್ಜರಿ ಬಿಸಿನೆಸ್ ಮಾಡಿಕೊಂಡಿದೆ. ಈ ಚಿತ್ರದಿಂದ ಐಕಾನ್ ಸ್ಟಾರ್ ಅಲ್ಲು ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ರು. ಪುಷ್ಪರಾಜ್ ಕ್ಯಾರೆಕ್ಟರ್, ಆ ಲುಕ್, ಅಲ್ಲು ಅರ್ಜುನ್ ಮ್ಯಾನರಿಸಂ, ಆ ಡೈಲಾಗ್ಸ್ ಎಲ್ಲವೂ ಟ್ರೆಂಡ್ ಆಗೋಯ್ತು. ಸದ್ಯಕ್ಕೆ ಮನರಂಜನಾ ಕ್ಷೇತ್ರದಲ್ಲಿ ಪುಷ್ಪ ಮೇನಿಯಾ ಸಖತ್ ಜೋರಾಗಿ ನಡಿತಿದೆ.. ಆದ್ರೆ ಈ ಪುಷ್ಪ ಚಿತ್ರಕ್ಕಾಗಿ ಬರೋಬ್ಬರಿ ಐದು ಸಿನಿಮಾಗಳನ್ನ ರಿಜೆಕ್ಟ್ ಮಾಡಿದ್ದಾರೆ ಅಲ್ಲು ಅರ್ಜುನ್.