ಹುಬ್ಬಳ್ಳಿ: ಹಳೇ ವೈಷಮ್ಯದ ವಿಚಾರವಾಗಿ ಸ್ನೇಹಿತರ ಮಧ್ಯೆ ಮಾರಾಮಾರಿ ನಡೆದು, ಇಬ್ಬರು ಕೊಲೆಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಗಣೇಶ ವಿರ್ಸಜನೆ ವೇಳೆಯೇ ಡಬಲ್ ಮರ್ಡರ್ ನಡೆದಿರುವ ಪರಿಣಾಮ ಹುಬ್ಬಳ್ಳಿ ಜನರು ಬೆಚ್ಚಿ ಬಿದ್ದಿದ್ದಾರೆ
ಹುಬ್ಬಳ್ಳಿಯ ಗೋಪನಕೊಪ್ಪ ಬಳಿ ಘಟನೆ ನಡೆದಿದ್ದು, ಹಳೇ ಸ್ನೇಹಿತರಾಗಿದ್ದ ವಡ್ಡರ ಓಣಿಯ ಮಂಜುನಾಥ ಕಬ್ಬಿನ್ ಹಾಗೂ ನಿಯಾಜ್ ಜೋರಮ್ಮನವರ ಕೊಲೆಯಾದ ವ್ಯಕ್ತಿಗಳು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಕೊಲೆಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗಿದ್ದು, ಮಂಜುನಾಥ ಕಬ್ಬಿನ್ ಜೊತೆ ನಿಯಾಜ್ ಜೋರಮ್ಮನವರ ಪದೇ ಪದೇ ಜಗಳ ಮಾಡುತ್ತಿದ್ದ
ಈ ಕಾರಣದಿಂದ ನಿಯಾಜ್‍ನ್ನು ಹೊಡೆಯಬೇಕೆಂದು ಕಾದುಕುಳಿತಿದ್ದ ಮಂಜುನಾಥ, ನಿನ್ನೆ ತಡರಾತ್ರಿ ತನ್ನ ಸಹಚರರ ಜೊತೆ ನಿಯಾಜ್‍ನನ್ನು ಹುಡುಕಿಕೊಂಡು ಹೋಗಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಹಳೆಯ ಸ್ನೇಹಿತರಿಬ್ಬರು ರಾಡ್‍ನಿಂದ ಹೊಡೆದಾಡಿಕೊಂಡು ಇಬ್ಬರು ಕೊಲೆಯಾಗಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಕಳೆದ ವರ್ಷವೂ ಸಹ ಗಣೇಶ ವಿರ್ಸಜನೆ ವೇಳೆಯೇ ಯುವಕನೋರ್ವನಿಗೆ ಚಾಕು ಇರಿದ ಪ್ರಕರಣ ಸಾಕಷ್ಟು ಸುದ್ದಿ ಮಾಡಿತ್ತು. ಹೀಗಾಗಿ ಪೊಲೀಸರು ಬುಧವಾರ ನಗರದಲ್ಲಿ ಸಾಕಷ್ಟು ಬಂದೋಬಸ್ತ್ ಮಾಡಿದ್ದರು. ಆದರೂ ಮಧ್ಯರಾತ್ರಿ ನಡೆದ ಘಟನೆಯಲ್ಲಿ ಇಬ್ಬರು ಕೊಲೆಯಾಗಿದ್ದಾರೆ.
Laxmi News 24×7