Breaking News

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ತೀರಾ..? ‘ಇನ್ಮುಂದೆ ನಿಮ್ಮ ಆಟ ನಡೆಯಲ್ಲ’ ಹುಷಾರ್..!

Spread the love

ಇಷ್ಟು ದಿನ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ, ಫೈನ್ ಕಟ್ಟದೆ ರಾಜಾರೋಷವಾಗಿ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಮನೆಗೆ ನೋಟಿಸ್ ನೀಡುವ ಆನ್​​ಲೈನ್ ವ್ಯವಸ್ಥೆ ಕಲ್ಪಿಸಿದ್ದ ಸಂಚಾರಿ ಪೊಲೀಸ್ ಇಲಾಖೆ, ಈಗ ತನ್ನ ವರಸೆ ಬದಲಾಯಿಸಿದೆ.

 

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸ್ ಕೈಲೀ ತಗ್ಲಾಂಡೋರಲ್ಲಿ, ಸ್ವಯಂಪ್ರೇರಿತವಾಗಿ ಫೈನ್ ಕಟ್ಟೋರು ವಿರಳ ಸಂಖ್ಯೆಯ ಸವಾರರು ಮಾತ್ರ. ಆದ್ರೆ, ಇನ್ಮುಂದೆ ಇಂತಹ ವಾಹನ ಸವಾರರ ಆಟ ನಡೆಯಲ್ಲ. ಟ್ರಾಫಿಕ್ ವೈಯಲೇಷನ್ ಮಾಡಿ ರಸ್ತೆ ಅಪಘಾತಗಳಿಗೆ ಕಾರಣರಾಗ್ತಿದ್ದರಿಗೆ ತಕ್ಕ ಪಾಠ ಕಲಿಸಲು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಇದಕ್ಕೆ ಟ್ರಾಫಿಕ್ ಪೊಲೀಸರು ಆಯ್ಕೆ ಮಾಡಿಕೊಂಡಿದ್ದು ಮಾತ್ರ ಆರ್​​ಟಿಓ ಕಚೇರಿ.

ನೋಟಿಸ್ ನೀಡಿದ್ರೂ ದಂಡ ಕಟ್ಟದಿದ್ದವರಿಗೆ ಪೊಲೀಸರು ಶಾಕ್
ನೋಟಿಸ್ ನೀಡಿದ್ರೂ ಕ್ಯಾರೇ ಎನ್ನದೇ ದಂಡ ಕಟ್ಟದಿದ್ದ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಶಾಕ್ ನೀಡಲು ಸಜ್ಜಾಗಿದ್ದಾರೆ. ಹಳೆ ಬಾಕಿ ವಸೂಲಿಗೆ ಆರ್​​ಟಿಒ ಕಚೇರಿ ಬಳಿಯೇ ಪೊಲೀಸರು ಠಿಕಾಣಿ ಹೂಡಲಿದ್ದಾರೆ. ಸಾರಿಗೆ ಪ್ರಾದೇಶಿಕ ಕಚೇರಿ ಬಳಿಯೇ ದಂಡ ವಸೂಲಿಗೆ ಪೊಲೀಸರು ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿ ನಗರ ವ್ಯಾಪ್ತಿಗೆ ಬರುವ ಹತ್ತು ಪ್ರಾದೇಶಿಕ ಕಚೇರಿಗಳಲ್ಲಿ ಟ್ರಾಫಿಕ್ ಪೊಲೀಸರು ಠಿಕಾಣಿ ಹೂಡಲಿದ್ದಾರೆ. ಸಾರಿಗೆ ಕಚೇರಿಗಳಿಗೆ ಅರ್ಹತಾ ಪತ್ರ ಬರುತ್ತಿರುವವರ ತಪಾಸಣೆ ಮಾಡಲಾಗುತ್ತೆ. ಆರ್​​ಟಿಒ ಕಚೇರಿಗೆ ಬಂದ ವಾಹನಗಳ ಮೇಲಿನ ದಂಡದ ಮೊತ್ತ ಪರಿಶೀಲನೆ ನಡೆಸಲಿದ್ದಾರೆ.

ಎಲ್ಲಾ ಕೇಸ್​ಗಳ​ ಪರಿಶೀಲನೆಯನ್ನ ಟ್ರಾಫಿಕ್ ಪೊಲೀಸರು ಆರ್​​ಟಿಒ ಕಚೇರಿ ಬಳಿಯೇ ನಡೆಸಲಿದ್ದಾರೆ. ಈ ವೇಳೆ ವಾಹನ ಸವಾರರು ಹಳೆ ದಂಡಗಳನ್ನ ಉಳಿಸಿಕೊಂಡಿದ್ದರೆ, ವಸೂಲಿ ಮಾಡಲು ಟ್ರಾಫಿಕ್ ಪೊಲೀಸ್ ಕಮಿಷನರ್ ಡಾ.ಬಿ.ಆರ್.ರವಿಕಾಂತೇಗೌಡ ಆದೇಶಿಸಿದ್ದಾರೆ. ಅದಲ್ದೇ, ಆರ್​ಟಿಒ ಕಚೇರಿಗಳ ಬಳಿ ಪಿಎಸ್​​ಐ ಅಥವಾ ಎಎಸ್‌ಐಗಳನ್ನೂ ನೇಮಕ‌ ಮಾಡಿಕೊಳ್ಳಲಾಗುತ್ತೆ. ಪಾಳಿಯ ಮೂಲಕ ಪಿಡಿಎ ಉಪಕರಣ ಸಹಿತ ನಿಯೋಜನೆ ಮಾಡಲು ನಿರ್ಧರಿಸಿದ್ದಾರೆ.


Spread the love

About Laxminews 24x7

Check Also

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the loveಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ