Breaking News

ರವಿ ಚೇನ್ನನ್ನವರ ಆಸ್ತಿ ವಿವಾದ ತಂದೆ ತಾಯಿ ಮಾಧ್ಯಮಕ್ಕೆ ಹೇಳಿದ್ದೇನು

Spread the love

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದು, ಇದೀಗ ಅವರ ತಾಯಿ-ತಂದೆ ಕೂಡ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ.

ಐಪಿಎಸ್ ಅಧಿಕಾರಿ ರವಿ ಡಿ.

ಚನ್ನಣ್ಣವರ್ ಅಕ್ರಮವಾಗಿ ಆದಾಯಕ್ಕೂ ಮೀರಿ ಆಸ್ತಿ ಹೊಂದಿದ್ದಾರೆ ಎಂಬುದಾಗಿ ಕೆಲವರು ಆರೋಪಿಸಿದ್ದು, ಆ ಬಗ್ಗೆ ಪರ-ವಿರೋಧ ಪ್ರತಿಕ್ರಿಯೆಗಳು ಕೂಡ ಕೇಳಿ ಬರುತ್ತಿವೆ. ಈ ಮಧ್ಯೆ ಆರೋಪದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿರುವ ರವಿ ಚನ್ನಣ್ಣವರ್ ಮಾನನಷ್ಟ ಮೊಕದ್ದಮೆಯನ್ನು ಕೂಡ ಹೂಡಿದ್ದಾರೆ.

ತಂದೆ ದ್ಯಾಮಪ್ಪ ಚನ್ನಣ್ಣವರ್ ಹಾಗೂ ತಾಯಿ ರತ್ನವ್ವ ಚನ್ನಣ್ಣವರ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ್ದು, ತಮ್ಮ ಕಿರಿಯ ಮಗ ರಾಘವೇಂದ್ರ ಚನ್ನಣ್ಣವರ್​ ಗುತ್ತಿಗೆದಾರರ ಲೈಸೆನ್ಸ್ ಹೊಂದಿದ್ದು, ಸಣ್ಣಪುಟ್ಟ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾನೆ. ನಾವು ವ್ಯವಸಾಯ ಮತ್ತು ಕಿರಿಯ ಮಗನ ವ್ಯವಹಾರದ ಲಾಭದಲ್ಲಿ ಕೆಲವು ಆಸ್ತಿಗಳನ್ನ ಗಳಿಸಿದ್ದೇವೆ‌.

ಜತೆಗೆ ವಿವಿಧ ಬ್ಯಾಂಕುಗಳಲ್ಲಿ ನಮ್ಮ ಸಾಲ ಕೂಡ ಇದೆ. ಇವೆಲ್ಲದರ ಬಗ್ಗೆ ಆಯಾ ಕಾಲಕ್ಕೆ ತಕ್ಕಂತೆ ಆದಾಯ ಇಲಾಖೆಗೆ ಮಾಹಿತಿ ಕೂಡ ನೀಡಲಾಗಿದೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವುದೆಲ್ಲ ಸುಳ್ಳು. ಅಂಥ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂಬುದಾಗಿ ಹೇಳಿದ್ದಾರೆ. ಮಾತ್ರವಲ್ಲ ತಮ್ಮ ಆಸ್ತಿ ವಿವರದ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ.

  

 


Spread the love

About Laxminews 24x7

Check Also

ನೂರಾರು ನವಜಾತ ಶಿಶುಗಳ ಜೀವ ಉಳಿಸಿದ ಲೇಡಿಗೋಷನ್ ಆಸ್ಪತ್ರೆ

Spread the loveಮಂಗಳೂರು: ಮಂಗಳೂರಿನ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಯಲ್ಲಿ, ತಾಯಿಯ ಮಮತೆಯಷ್ಟೇ ಪವಿತ್ರವಾದೊಂದು ಕ್ರಾಂತಿಕಾರಿ ಯೋಜನೆ ನಿಶ್ಯಬ್ದವಾಗಿ ನಡೆಯುತ್ತಿದೆ. ‘ಅಮೃತ ಘಟಕ’ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ