ಬೆಂಗಳೂರು: ‘ಬಡವರು ‘ಇಂತಿಷ್ಟೇ ತಿನ್ನಬೇಕು’ ಎಂದು ಹಸಿವನ್ನು ನಿಯಂತ್ರಿಸಲು ಹೊರಟ ಜಗತ್ತಿನ ಮೊಟ್ಟ ಮೊದಲ ಸಚಿವರು ಎಂಬ ಹೆಗ್ಗಳಿಕೆ ಉಮೇಶ್ ಕತ್ತಿ ಅವರದ್ದು!’ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಒಬ್ಬರಿಗೆ ತಿಂಗಳಿಗೆ 5 ಕೆ.ಜಿ ಅಕ್ಕಿ ಸಾಕು’ ಎಂಬ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸಮಾಜದ ಹಾಗೂ ಬಡವರ ಕಷ್ಟನಷ್ಟಗಳ ಬಗ್ಗೆ ಕಿಂಚಿತ್ತೂ ಅರಿವಿರದ ಆಹಾರ ಸಚಿವರಿಗೆ ತಿಳಿದಿರುವುದು ಉಡಾಫೆ ಮಾತುಗಳಷ್ಟೇ’ ಎಂದು ವಾಗ್ದಾಳಿ ನಡೆಸಿದೆ.
‘ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸಿದ್ದಷ್ಟೇ ಇವರ ಸಾಧನೆ’ ಎಂದು #ಬಿಜೆಪಿಯಅಸಮರ್ಥರು ಹ್ಯಾಷ್‌ಟ್ಯಾಗ್ ಬಳಸಿ ಉಮೇಶ್ ಕತ್ತಿ ಅವರ ಕಾರ್ಯವೈಖರಿಯನ್ನು ಕಾಂಗ್ರೆಸ್ ಟೀಕಿಸಿದೆ.
Laxmi News 24×7