Breaking News

ಬೆಂಗಳೂರಲ್ಲಿ ರೋಗಿಯ ಪ್ರಾಣ ಉಳಿಸಲು ಸ್ವತಃ ತಾನೇ ಮೆಕ್ಯಾನಿಕ್ ಆದ ಪೊಲೀಸ್​! ತಪ್ಪಿತು ಅನಾಹುತ, ಪೇದೆ ಕಾರ್ಯಕ್ಕೆ ಶ್ಲಾಘನೆ

Spread the love

ಬೆಂಗಳೂರು: ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ರೋಗಿಯ ಪ್ರಾಣ ಉಳಿಸಲು ಸ್ವತಃ ತಾನೇ ಮೆಕ್ಯಾನಿಕ್ ಆದ ಸಂಚಾರಿ ಪೊಲೀಸ್ ಪೇದೆಯೊಬ್ಬರ ಸ್ಟೋರಿ ಇದು. ಸರಿಯಾದ ಸಮಯಕ್ಕೆ ಈ ಪೊಲೀಸಪ್ಪ ಬಾರದಿದ್ದಲ್ಲಿ ಅನಾಹುತ ಸಂಭವಿಸುತ್ತಿತ್ತು. ಅಷ್ಟರಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ಸಿಬ್ಬಂದಿ ಕಾಸಪ್ಪ ಕಲ್ಲೂರು ಸಮಯ ಪ್ರಜ್ಞೆ ಮೆರೆದಿದ್ದು, ಇವರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರ್ತಿದೆ.

ಅಷ್ಟಕ್ಕೂ ಪೊಲೀಸ್ ಸಿಬ್ಬಂದಿ ಮಾಡಿದ ಮತಹ್ವದ​ ಕಾರ್ಯ ಎಂತಹದ್ದು ಗೊತ್ತಾ?

ಇದು ನಿನ್ನೆ(ಮಂಗಳವಾರ) ಬೆಂಗಳೂರಲ್ಲಿ ನಡೆದ ಘಟನೆ. ಗ್ಲೋಬಲ್ ಹಾಸ್ಪಿಟಲ್​ನಿಂದ ಬೇರೆ ಖಾಸಗಿ ಆಸ್ಪತ್ರೆಗೆ ರೋಗಿಯೊಬ್ಬರನ್ನು ಆಂಬುಲೆನ್ಸ್​ನಲ್ಲಿ ಕುಟುಂಬಸ್ಥರು ಶಿಫ್ಟ್ ಮಾಡುತ್ತಿದ್ದರು. ರೋಗಿಯನ್ನು ಕರೆದೊಯ್ಯುವ ಮಾರ್ಗಮಧ್ಯೆ ಅಂದರೆ ವಿಧಾನಸೌಧದ ಸಿಐಡಿ ಕಚೇರಿ ಬಳಿ ಆಂಬುಲೆನ್ಸ್​ನ ​ಟಯರ್ ಪಂಚರ್ ಆಗಿಬಿಡ್ತು. ಕಂಗಾಲಾದ ರೋಗಿಯ ಪತ್ನಿ ಹಾಗೂ ಮಗಳು ಕಣ್ಣೀರಿಡುತ್ತಾ 10ಕ್ಕೂ ಹೆಚ್ಚು ಆಂಬುಲೆನ್ಸ್​ಗೆ ಕಾಲ್ ಮಾಡಿದ್ದರು. ಪೊಲೀಸ್ ಸಿಬ್ಬಂದಿ ಕರೆ ಮಾಡಿದರೂ ಸಮಯಕ್ಕೆ ಸರಿಯಾಗಿ ಯಾವುದೇ ಆಂಬುಲೆನ್ಸ್ ಸಿಗಲಿಲ್ಲ. ರೋಗಿಯ ಆಕ್ಸಿಜನ್​ ಲೆವೆಲ್​ ಕೂಡ ಕಡಿಮೆ ಆಗ್ತಿತ್ತು. ಸ್ಥಳದಲ್ಲೇ ಇದ್ದ ಕರ್ತವ್ಯನಿರತ ಸಂಚಾರಿ ಪೊಲೀಸ್ ಸಿಬ್ಬಂದಿ ಕಾಸಪ್ಪ ಕಲ್ಲೂರು ಅವರಿಗೆ ಆಂಬುಲೆನ್ಸ್​ ಒಳಗಿದ್ದ ರೋಗಿ ಕ್ರಿಟಿಕಲ್​ ಕಂಡಿಷನ್​ನಲ್ಲಿದ್ದಾರೆ ಎಂಬುದು ಅರಿವಾಯ್ತು.

ಬೇರೆ ಆಂಬುಲೆನ್ಸ್​ ಬರೋದು ತಡವಾದ್ರೆ ರೋಗಿಯ ಪ್ರಾಣವೇ ಹೋಗಬಹುದು. ಇನ್ನು ತಡ ಮಾಡೋದು ಬೇಡ ಎಂದು ತಾನೇ ಮೆಕ್ಯಾನಿಕ್ ಆಗಿ ಆಂಬುಲೆನ್ಸ್​ನ ಟಯರ್ ಬದಲಿಸಿ ಆಂಬುಲೆನ್ಸ್ ಹೊರಡಲು ಅನುವು ಮಾಡಿಕೊಟ್ಟರು. ಟಯರ್​ ಬದಲಿಸಿ ಇನ್ನೇನು ಆಂಬುಲೆನ್ಸ್ ಹೊರಡಬೇಕು ಅನ್ನುವಾಗ ಮತ್ತೊಂದು ಆಂಬುಲೆನ್ಸ್ ಬಂದಿದೆ. ಆಂಬುಲೆನ್ಸ್ ಹೊರಡುವ ಸಮಯ ಮಂಗಳವಾರ ಮಧ್ಯಾಹ್ಮ 1.10ಕ್ಕೆ ಆಂಬುಲೆನ್ಸ್​ ಟೈಯರ್​ ಪಂಚರ್​ ಆಗಿತ್ತು. ಬಳಿಕ 1.55ಕ್ಕೆ ಆಂಬುಲೆನ್ಸ್​ ಹೊರಟಿದೆ. 45 ನಿಮಿಷವಾದರೂ ಬೇರೆ ಆಂಬುಲೆನ್ಸ್​ ಸಿಕ್ಕಿರಲಿಲ್ಲ. ರೋಗಿಯ ಪ್ರಾಣ ಉಳಿಸಲು ಸಮಯ ಪ್ರಜ್ಞೆ ಜತೆಗೆ ಮಾನವೀಯತೆ ಮರೆದ ಕಾಸಪ್ಪ‌ ಕಲ್ಲೂರು ಅವರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.


Spread the love

About Laxminews 24x7

Check Also

ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು….

Spread the love ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು…. ಅದ್ದೂರಿ ಗಣೇಶೋತ್ಸವಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ