ಕಲಬುರಗಿ: ಫೋಟೊಗ್ರಾಫರ್ ಶಿವಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ರೈಲ್ವೆ ಪೊಲೀಸರು ಐವರು ಹಂತಕರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಹಾಂತೇಶ್ ಆಳಂದಕರ್, ಬಸವರಾಜ್ ಸಲಗಾರ್, ಫಕರಿಪ್ಪ ಸಲಗಾರ್, ಸಿದ್ದಾರೂಢ ಕೋರಬಾರ್ ಹಾಗೂ ಅಶೋಕ ಜಮಾದಾರ್ ಎಂದು ಗುರುತಿಸಲಾಗಿದೆ.
ಕೊಲೆಯಾದ ಶಿವಕುಮಾರ್, ಆರೋಪಿ ಮಹಾಂತೇಶ್ ತಾಯಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ವರಸೆಯಲ್ಲಿ ಇಬ್ಬರು ಸಹೋದರರು. ಮಹಾಂತೇಶ್ಗೆ ಶಿವಕುಮಾರ್ ದೊಡ್ಡಪ್ಪನ ಮಗನಾಗಬೇಕು. ಚಿಕ್ಕಮ್ಮನ ಜತೆಯಲ್ಲೇ ಅಕ್ರಮ ಸಂಬಂಧ ಹೊಂದಿದ್ದನ್ನು ಮಹಾಂತೇಶ್ ಕಣ್ಣಾರೆ ಕಂಡಿದ್ದ.
ಮಹಾಂತೇಶ್ ಆಳಂದಕರ್
ಬಸವರಾಜ್ ಸಲಗಾರ್ ,
ಅಶೋಕ ಜಮಾದಾರ್
ಫಕರಿಪ್ಪ ಸಲಗಾರ್
ಸಿದ್ದಾರೂಢ ಕೋರಬಾರ್ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ ದೊಡ್ಡಪ್ಪನ ಮಗನ ಮೇಲೆ ಸೇಡು ತಿರಿಸಿಕೊಳ್ಳಲು ಮಾವ ಬಸವರಾಜ್ ಜತೆ ಸೇರಿಕೊಂಡು ಶಿವಕುಮಾರ್ ಕೊಲೆಗೆ ಮಹಾಂತೇಶ್ ಸಂಚು ರೂಪಿಸಿದ್ದ. ಜನವರಿ 25 ರಂದು ಆಳಂದ ತಾಲ್ಲೂಕಿನ ಶ್ರೀಚಂದ ಗ್ರಾಮದಿಂದ ಶಿವಕುಮಾರ್ನನ್ನು ಬೈಕ್ ಮೇಲೆ ಕರೆದುಕೊಂಡು ಬಂದಿದ್ದ ಮಹಾಂತೇಶ್, ಕೊಲೆ ಮಾಡಿ ಕಲಬುರಗಿ ಹೊರವಲಯದ ಸಾವಳಗಿ ಬಬಲಾದ್ ರೈಲ್ವೆ ಹಳಿಯ ಮೇಲೆ ಬಿಸಾಕಿ ಎಸ್ಕೇಪ್ ಆಗಿದ್ದರು.