ಬೆಂಗಳೂರು : ಬೇಕಾಬಿಟ್ಟಿ ಟೋಯಿಂಗ್ʼಗೆ ಜನರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಟೋಯಿಂಗ್ ಸ್ಥಿತಿ ನೀತಿ ಪರಿಷ್ಕರಣೆ ಸಂಬಂಧ ಸಭೆ ನಡೆಸಿದರು.
ಸಿಟಿಯಲ್ಲಿ ಪೊಲೀಸರ ಟೋಯಿಂಗ್ ಟಾರ್ಚರ್‌ಗೆ ಜನ ಹೈರಾಣಾಗಿ ಹೋಗಿದ್ದಾರೆ.
ಇದರ ಸಂಬಂಧ ಕೆಲವು ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಹಿನ್ನೆಲೆ ಟೋಯಿಂಗ್ ಗೊಂದಲದ ಬಗ್ಗೆ ರೇಸ್ ಕೋರ್ಸ್ ರಸ್ತೆಯಲ್ಲಿ ಶಕ್ತಿ ಭವನದಲ್ಲಿ ಬೊಮ್ಮಾಯಿ ಸಭೆ ನಡೆಸಿದರು. ಬೊಮ್ಮಾಯಿ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಇಂದು ನಡೆಯಿತು. ಹೊಸ ಮಾರ್ಗಸೂಚಿ ಸಿದ್ದಪಡಿಸೊ ತನಕ ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಟೋಯಿಂಗ್ ಕಿರಿಕಿರಿ ಇಲ್ಲ ಎಂದು ಸಂಜೆ ನಡೆದ ಸಿಎಂ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ.
ಟೋಯಿಂಗ್ ಟಾರ್ಚರ್’ ಗೆ ವಾಹನ ಸವಾರರು ಹೈರಾಣು ; ತಾತ್ಕಾಲಿಕ ಮದ್ದು ನೀಡಿದ ‘ಸಿಎಂ ಬೊಮ್ಮಾಯಿ’
ಟೋಯಿಂಗ್ ವಾಹನಗಳ ಕಾರ್ಯ ವೈಖರಿ ಬಗ್ಗೆ ಕೂಲಕಂಶವಾಗಿ ಪರಿಶೀಲನೆ ಮಾಡಿ. ಎಸ್‍ಒಪಿ ಏನು ಇದೆ ಅವುಗಳಲ್ಲಿ ಕೆಲವು ಬದಲಾವಣೆಗಳಿಗೆ ಸೂಚನೆ ನೀಡಿದ್ದಾರೆ. ಅದು ಕೂಡ ಪಾರದರ್ಶಕತೆಯ ದೃಷ್ಟಿಯಿಂದ ಪಾರದರ್ಶಕವಾಗಿರಬೇಕು. ಅಲ್ಲಿಯ ತನಕ ಟೋಯಿಂಗ್ ವಾಹನವನ್ನ ನಿಯಂತ್ರಿಸಿ ಕಾರ್ಯಚರಣೆ ಮಾಡುವುದಕ್ಕೆ ನಾವು ಸೂಚನೆ ಕೊಡುತ್ತಿದ್ದೇವೆ. ಅದನ್ನ ಪರಿಶೀಲನೆ ಮಾಡಿ ಇಲಾಖೆ ಹೊಸ ಎಸ್‍ಒಪಿಯನ್ನ ಕೆಲವು ಬದಲಾವಣೆ ತರುವುದಕ್ಕೆ ಸೂಚನೆ ಕೊಟ್ಟಿದ್ದಾರೆ. ಯಾವುದೇ ರೀತಿಯ ಆರೋಪಗಳಿಗೆ ಅವಕಾಶವಾಗದಂತೆ ಬದಲಾವಣೆ ಮಾಡಲು ಸೂಚನೆ ನೀಡಿದ್ದಾರೆ.
ಟೋಯಿಂಗ್ ನೀತಿ ಬಗ್ಗೆ ಕಮಲ್ ಪಂತ್, ರವಿಕಾಂತೇಗೌಡ ಹೇಳಿದ್ದೇನು..?
ಟೋಯಿಂಗ್ ನೀತಿ ಪರಿಷ್ಕರಣೆ ಬಗ್ಗೆ ಸುದೀರ್ಘ ಚರ್ಚೆಯಾಗಿದೆ. ರಾಂಗ್ ಪಾರ್ಕಿಂಗ್ಗೆ ಬೇರೆ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೋಮವಾರ ಹೇಳಿದ್ದಾರೆ.
ಬೇಕಾಬಿಟ್ಟಿ ಟೋಯಿಂಗ್ʼಗೆ ಜನರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಟೋಯಿಂಗ್ ಸ್ಥಿತಿ ನೀತಿ ಪರಿಷ್ಕರಣೆ ಸಂಬಂಧ ಸಭೆ ನಡೆಸಿದರು. ಟೋಯಿಂಗ್ ವೆಹಿಕಲ್ ನಿಯಂತ್ರಣಕ್ಕೆ ಸಿಎಂ ಸೂಚಿಸಿದ್ದಾರೆ. ಪಾರದರ್ಶಕ ದೃಷ್ಟಿಯಿಂದ ಸಿಎಂ ಕೆಲ ಸೂಚನೆ ಕೊಟ್ಟಿದ್ದಾರೆ. ಕೆಲವು ಬದಲಾವಣೆಗಳನ್ನು ತರಲು ಚಿಂತನೆ ನಡೆಸಲಿದ್ದೇವೆ ಎಂದು ಟೋಯಿಂಗ್ ನೀತಿ ಪರಿಷ್ಕರಣೆ ಸಂಬಂಧ ಸಿಎಂ ಸಭೆ ವಿಚಾರವಾಗಿ ಡಾ.ಬಿ.ಆರ್. ರವಿಕಾಂತೇಗೌಡ ಹೇಳಿಕೆ ನೀಡಿದ್ದಾರೆ.