Breaking News

ತುಮಕೂರು: ಅವಮಾನಿಸಿದ ಷೋ ರೂಂನಲ್ಲೇ ವಾಹನ ಖರೀದಿಸಿದ ರೈತ

Spread the love

ತುಮಕೂರು: ಇತ್ತೀಚೆಗೆ ವಾಹನ ಖರೀದಿಸಲು ನಗರದ ಷೋ ರೂಂ ಒಂದಕ್ಕೆ ಭೇಟಿ ನೀಡಿದ್ದ ತಾಲ್ಲೂಕಿನ ರಾಮನಪಾಳ್ಯದ ರೈತ ಕೆಂಪೇಗೌಡ ಅವರನ್ನು ಷೋ ರೂಂ ಸಿಬ್ಬಂದಿ ಅವಮಾನಿಸಿದ ಪ್ರಕರಣ ಸದ್ಯ ಸುಖಾಂತ್ಯ ಕಂಡಿದ್ದು, ಯುವ ರೈತ ಅದೇ ಷೋ ರೂಂನಲ್ಲಿ ವಾಹನ ಖರೀದಿಸಿದ್ದಾರೆ.

ಕಾರುಗಳು ಮತ್ತು ಬೈಕ್‌ಗಳ ಇತ್ತೀಚಿನ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಈ ಕುರಿತು ಮಹೀಂದ್ರ ಚೇರ್ಮನ್‌ ಆನಂದ್‌ ಮಹೀಂದ್ರ ‘ಲೆಟ್‌ ಮಿ ಆಯಡ್‌ ಮೈ ವೆಲ್‌ಕಮ್‌ ಟು ಕೆಂಪೇಗೌಡ’ ಎಂದು ಟ್ವೀಟ್‌ ಮಾಡುವ ಮೂಲಕ ಮಹೀಂದ್ರ ಕುಟುಂಬಕ್ಕೆ ಕೆಂಪೇಗೌಡ ಅವರನ್ನು
ಸ್ವಾಗತಿಸಿದ್ದಾರೆ.

ಜ.21ರಂದು ನಗರದ ಷೊ ರೂಂ ಗೆ ವಾಹನ ಖರೀದಿಸಲು ಬಂದಿದ್ದ ರೈತ ಕೆಂಪೇಗೌಡ ಮತ್ತು ಅವರ ಸ್ನೇಹಿತರನ್ನು ಅವರ ವೇಷಭೂಷಣ ನೋಡಿ, ಷೋ ರೂಂ ಸಿಬ್ಬಂದಿ ನಿನಗೆ ₹10 ಕೊಡೋಕೆ ಆಗಲ್ಲ, ಕಾರ್‌ ಕೊಳ್ಳುವ ಯೋಗ್ಯತೆ ನಿನಗಿಲ್ಲ ಎಂದು ಅವಮಾನಿಸಿ ವಾಪಸ್‌ ಕಳುಹಿಸಿದ್ದರು. ಘಟನೆ ನಡೆದ ಅರ್ಧ ಗಂಟೆಯೊಳಗೆ ಕೆಂಪೇಗೌಡ ₹10 ಲಕ್ಷ ಹಣವನ್ನು ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದ. ಆದರೆ ಷೋ ರೂಂ ಸಿಬ್ಬಂದಿ ದೊಡ್ಡ ಮೊತ್ತವನ್ನು ಒಮ್ಮೆಲೆ ಸ್ವೀಕರಿಸಲು ಸಾಧ್ಯವಿಲ್ಲ. ಹಾಗಾಗಿ ಕಾರ್‌ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಇದರಿಂದ ಸಮಾಧಾನಗೊಳ್ಳದ ರೈತಕ್ಷಮೆಯಾಚಿಸುವಂತೆ ಪೊಲೀಸ್ ಠಾಣೆಯಮೆಟ್ಟಿಲು ಹತ್ತಿದ್ದರು. ಕೊನೆಗೆ ಷೋ ರೂಂ ಸಿಬ್ಬಂದಿ ಕ್ಷಮೆಯಾಚಿಸಿದ್ದರು. ಈ ಘಟನೆ ಎಲ್ಲೆಡೆ ವೈರಲ್‌ ಆಗಿತ್ತು. ಸದ್ಯ ಕೆಂಪೇಗೌಡ ಅದೇ ಷೊ ರೂಂ ನಲ್ಲಿ ಮಹೀಂದ್ರ ಬೊಲೆರೋ ಗೂಡ್ಸ್‌ ವಾಹನ ಖರೀದಿಸಿ ನಗೆ ಬೀರಿದ್ದಾರೆ.


Spread the love

About Laxminews 24x7

Check Also

2026ರ ಮೊದಲ ಚಂದ್ರಗ್ರಹಣ: ಈ ರಾಶಿಯವರಿಗೆ ಒಲಿಯಲಿದೆ ರಾಜಯೋಗ ಹೋಳಿ ಹಬ್ಬದಂದೇ ಯಾರಿಗೆ ಅದೃಷ್ಟ? ಯಾರಿಗೆ ಎಚ್ಚರಿಕೆ?

Spread the love2026ರ ವರ್ಷವು ಆಧ್ಯಾತ್ಮಿಕವಾಗಿ ಸಂಚಲನ ಮೂಡಿಸಲು ಸಜ್ಜಾಗಿದೆ. ಈ ಬಾರಿ ಬಣ್ಣಗಳ ಹಬ್ಬ ಹೋಳಿಯ ಸಂಭ್ರಮದ ನಡುವೆಯೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ