Breaking News

ಡಿವೋರ್ಸ್‌ ನಂತ್ರವೂ ಪತ್ನಿಯ ಜತೆ ಓಡಾಡಿಕೊಂಡಿದ್ದ ಹೃತಿಕ್‌ ಇದೀಗ ಹೊಸಬಳ ಜತೆ ಹೋಟೆಲ್‌ನಲ್ಲಿ!

Spread the love

ಮುಂಬೈ: ಮದುವೆ, ವಿಚ್ಛೇದನ, ವಿವಾಹೇತರ ಸಂಬಂಧ, ಡೇಟಿಂಗ್‌… ಇಂಥವೆಲ್ಲವೂ ಚಿತ್ರರಂಗದಲ್ಲಿ ಸಾಮಾನ್ಯ ಎನಿಸಿಬಿಟ್ಟಿದೆ. ದಿಢೀರ್‌ ಮದುವೆಯಾಗುವುದು, ಅಷ್ಟೇ ವೇಗದಲ್ಲಿ ಡಿವೋರ್ಸ್‌ ಕೊಡುವುದು ನಂತರ ಇನ್ನೊಬ್ಬಳ ಜತೆ ತಿರುಗುವುದು ಇಲ್ಲವೇ ಮದುವೆಯಾಗಿರುವಾಗಲೇ ಇನ್ನೊಬ್ಬರ ಜತೆ ಸಂಬಂಧ ಹೊಂದುವುದು..

ಹೀಗೆ ಅನೇಕ ವಿಷಯಗಳಿಂದ ಸೆಲಿಬ್ರಿಟಿಗಳು ಸುದ್ದಿಯಾಗುತ್ತಲೇ ಇರುತ್ತಾರೆ. ಅವರ ಸಾಲಿಗೆ ಸೇರಿದ್ದಾರೆ ಖ್ಯಾತ ಬಾಲಿವುಡ್‌ ತಾರೆ ಹೃತಿಕ್‌ ರೋಷನ್‌.

ಹಿಂದೊಮ್ಮೆ ಮದುವೆಯಾದ ಬಳಿಕವೂ ನಟಿ ಕಂಗನಾ ರಣಾವತ್‌ ಜತೆಗೆ ಸಂಬಂಧ ಹೊಂದಿ ನಂತರ ಆಕೆಗೆ ಮೋಸ ಮಾಡಿರುವ ಗಂಭೀರ ಆರೋಪ ಹೊತ್ತಿರುವ ಹೃತಿಕ್‌ ರೋಷನ್‌, ಪತ್ನಿ ಸೂಸನ್‌ಗೆ 2014ರಲ್ಲಿ ವಿಚ್ಛೇದನ ಕೊಟ್ಟಿದ್ದಾರೆ. ಇಬ್ಬರು ಮಕ್ಕಳನ್ನು ಪಡೆದ ಬಳಿ ತಮ್ಮ 14 ವರ್ಷದ ದಾಂಪತ್ಯ ಜೀವನವನ್ನು ಅಂತಿಮಗೊಳಿಸಿದ್ದ ನಟ, ವಿಚ್ಛೇದನದ ನಂತರವೂ ಪತ್ನಿ, ಮಕ್ಕಳೊಂದಿಗೆ ಇದ್ದರು. ಒಟ್ಟಿಗೇ ಟ್ರಿಪ್‌ಗೆ ಹೋಗಿಯೂ ಸುದ್ದಿಯಾಗಿದ್ದರು.

ಬಾಲಿವುಡ್​ನ ಮೋಸ್ಟ್​ ಹ್ಯಾಂಡ್​ಸಮ್​, ಗ್ರೀಕ್​ ಗಾಡ್​ ಎಂದೆಲ್ಲಾ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿರುವ ಹೃತಿಕ್‌, ನಟಿ ಸಬಾ ಆಜಾದ್ ಜತೆ ಹೃತಿಕ್‌ ರೋಷನ್‌ ಹೋಟೆಲ್‌ ಒಂದರಲ್ಲಿ ಕಾಣಿಸಿಕೊಂಡಿದ್ದು, ಭಾರಿ ಗುಸುಗುಸು ಶುರುವಾಗಿದೆ. ಸದಾ ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ರಹಸ್ಯವಾಗಿ ಇಡುವಲ್ಲಿ ಪ್ರಸಿದ್ಧಿ ಹೊಂದಿರುವ ಹೃತಿಕ್‌ ರಾತ್ರಿ ಡಿನ್ನರ್‌ಗೆ ಸಬಾ ಜತೆ ಕೈಕೈ ಹಿಡಿದು ಹೋಗಿದ್ದು ಭಾರಿ ಸುದ್ದಿಯಾಗಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ