ಸಿಎಂ ಬಸವರಾಜ ಬೊಮ್ಮಾಯಿಯವರ ( CM Basavaraj Bommai ) ನೇತೃತ್ವದಲ್ಲಿ ನಡೆದಂತ ಕೊರೋನಾ ಕಂಟ್ರೋಲ್ ( Corona Control ) ಸಮಿತಿಯ ಸಭೆಯಲ್ಲಿ, ಕೋವಿಡ್ ಸೋಂಕಿತರಾಗಿ ( Coronavirus ) ಹೋಂ ಐಸೋಲೇಷನ್ ನಲ್ಲಿ ( Home Isolation ) ಇರೋರಿಗೆ, ಮನೆಗೆ ಮೆಡಿಸಿನ್ ಕಿಟ್ ( Medicine Kit ) ವಿತರಿಸುವಂತೆ ಸೂಚಿಸಲಾಗಿತ್ತು.
ಅದರ ಭಾಗವಾಗಿ ಶೀಘ್ರವೇ ಮನೆ ಬಾಗಿಲಿಗೆ ಕೋವಿಡ್ ಸೋಂಕಿತರಿಗೆ ಮೆಡಿಸಿನ್ ಕಿಟ್ ವಿತರಣೆ ಆಗಲಿದೆ.
ಈಗಾಗಲೇ ರಾಜ್ಯ ಆರೋಗ್ಯ ಇಲಾಖೆಯಿಂದ ಇದಕ್ಕೆ ಬೇಕಾದಂತ ಎಲ್ಲಾ ತಯಾರಿಯನ್ನು ಮಾಡಿಕೊಳ್ಳಲಾಗಿದ್ದು, ಸೋಂಕಿತರ ಲಕ್ಷಣಗಳ ಆಧಾರದ ಮೇಲೆ ವೈದ್ಯರ ಸಲಹೆಯೊಂದಿಗೆ ಮೆಡಿಸಿನ್ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತದೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಅವರು, ಹೋಂ ಐಸೋಲೇಷನ್ ನಲ್ಲಿರೋರಿಗೆ ಆಯಾ ವ್ಯಾಪ್ತಿಯ ಆರೋಗ್ಯ ಇಲಾಖೆಯಿಂದ ಮಾನಿಟರಿಂಗ್ ಮಾಡುವಂತ ಕೆಲಸವನ್ನು ಮಾಡಲಾಗುತ್ತಿದೆ.