Breaking News

ಮಲಪ್ರಭಾ ನದಿಪಾತ್ರದಲ್ಲಿ ಆಗಿರುವ ಅಕ್ರಮ ಒತ್ತುವರಿಯನ್ನು ಆದಷ್ಟು ಬೇಗ ಸರ್ವೇ ಮಾಡಲಾಗುವುದು: ರಮೇಶ್ ಜಾರಕಿಹೊಳಿ‌

Spread the love

ಬೆಳಗಾವಿ: ಮಲಪ್ರಭಾ ನದಿಪಾತ್ರದಲ್ಲಿ ಆಗಿರುವ ಅಕ್ರಮ ಒತ್ತುವರಿಯನ್ನು ಆದಷ್ಟು ಬೇಗ ಸರ್ವೇ ಮಾಡಲಾಗುವುದು. ಅದಕ್ಕಾಗಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ, ಸರ್ವೆ ಕಾರ್ಯ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿ ಮತ್ತು ಆಲಮಟ್ಟಿಯಲ್ಲಿ ಸಿಎಂ ಅವರು, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿ, ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಬೆಂಗಳೂರಿನಲ್ಲಿ ನೆರೆ ಪರಿಹಾರ ಕುರಿತು ಮತ್ತೊಮ್ಮೆ ಸಭೆ ಮಾಡಿ ಜಿಲ್ಲಾವಾರು ಪರಿಹಾರ ನೀಡಲು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.

ಕೃಷ್ಣ ನದಿ ಪಾತ್ರದಲ್ಲಿ ಮಳೆಯಿಂದಾಗಿ ಹಾನಿಯಾಗಿದೆ ಆದರೆ ಈ ಬಾರಿ ಕೈಗೊಂಡ ಮುಂಜಾಗ್ರತಾ ಕ್ರಮಗಳ ಪರಿಣಾಮವಾಗಿ ಪ್ರವಾಹದಿಂದ ಹಾನಿಯಾಗಿಲ್ಲ. ಐದು‌ ಜಿಲ್ಲೆಗಳಿಗ ನೆರೆ ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

ನಾಳೆ ರಾಮದುರ್ಗದಲ್ಲಿ ಧರಣಿನಿರತ ನೆರೆ ಸಂತ್ರಸ್ತರ ಭೇಟಿಯಾಗಿ ಚರ್ಚೆ ಮಾಡುತ್ತೇನೆ. ಬೆಳಗಾವಿ ಜಿಲ್ಲೆಯ 30 ಗ್ರಾಮಗಳ ಸ್ಥಳಾಂತರ ಕುರಿತು ಪರಿಶೀಲನೆ ಮಾಡುತ್ತೇನೆ ಎಂದರು.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ

Spread the love ಬೆಳಗಾವಿಯಲ್ಲಿ ಭಾರಿ ಮಳೆಗೆ ಮನೆ ಕುಸಿತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯಲ್ಲಿ ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ