ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ಹಾವಳಿಯು ರೈತರ ಸಾಲ ವಿತರಣೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು 30 ಲಕ್ಷ ರೈತರಿಗೆ ಸಾಲ ವಿತರಣೆಗಾಗಿ ಡಿಸಿಸಿ ಬ್ಯಾಂಕ್‌ಗಳಿಗೆ ಗುರಿ ನೀಡಲಾಗಿದೆ.
ಜತೆಗೆ, ರೈತರು ಸಾಲಕ್ಕಾಗಿ ಹೆಸರು ನೋಂದಣಿ ಮಾಡಿ ಕೊಳ್ಳಲು ಹೊಸ ಸಾಫ್ಟ್ವೇರ್‌ನಲ್ಲಿ ತೊಂದರೆಯಾಗುತ್ತಿದ್ದ ಕಾರಣ ಮಾರ್ಚ್ 31ರ ವರೆಗೆ ಹಳೆ ಪದ್ಧತಿ ಯಲ್ಲೇ ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತುತ 19.04 ಲಕ್ಷ ರೈತರಿಗೆ 13,347 ಸಾವಿರ ಕೋ. ರೂ. ಸಾಲ ವಿತರಣೆಯಾಗಿದ್ದು, ಜನವರಿ ಅಂತ್ಯಕ್ಕೆ 20 ಲಕ್ಷ ರೈತರಿಗೆ ಹಾಗೂ ಜೂನ್ ಒಳಗೆ 30 ಲಕ್ಷ ರೈತರಿಗೆ 20,810 ಕೋಟಿ ರೂ. ಸಾಲ ವಿತರಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಡಿಸಿಸಿ ಸಭೆಯಲ್ಲೂ ನಿರ್ಧಾರ
ಬೆಳೆ ಸಾಲ ವಿಷಯದಲ್ಲಿ ಯಾವುದೇ ಆತಂಕ ಮೂಡದಂತೆ ನೋಡಿಕೊಳ್ಳಲು ಡಿಸಿಸಿ ಬ್ಯಾಂಕ್‌ಗಳ ಅಧ್ಯಕ್ಷರ ಸಭೆಯಲ್ಲೂ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿಂದಿನ ವರ್ಷಗಳ ಮಾಸಿಕವಾರು ಬೆಳೆ ಸಾಲ ಬೇಡಿಕೆಯ ಮಾಹಿತಿ ಆಧಾರದಲ್ಲಿ ಯಾವ್ಯಾವ ತಿಂಗಳಿಗೆ ಎಷ್ಟೆಷ್ಟು ಸಾಲದ ಅಗತ್ಯವಿದೆ ಎಂದು ಸಿದ್ಧಪಡಿಸಿರುವ ಪಟ್ಟಿ ಪ್ರಕಾರ ಸಾಲ ವಿತರಣೆ ಬಗ್ಗೆ ನಿಗಾ ವಹಿಸಲು ನಿರ್ದೇಶನ ನೀಡಲಾಗಿದೆ.