ಕೊಪ್ಪಳ: ಕೊರೊನಾ ಮೊದಲು ಹಾಗೂ ಎರಡನೆಯ ಅಲೆಯು (Corona Wave) ಕೊಪ್ಪಳ (Koppal) ಜಿಲ್ಲೆಗೆ ಸ್ವಲ್ಪ ತಡವಾಗಿ ಎಂಟ್ರಿ ಕೊಟ್ಟರೂ ನಂತರ ಅಬ್ಬರಕ್ಕೆ ಇಡೀ ಜಿಲ್ಲೆ ನಲುಗುವಂತೆ ಮಾಡಿತ್ತು ಇದೇ ರೀತಿ ರಾಜ್ಯದಲ್ಲಿ ಕೊರೊನಾ ಮೂರನೆಯ ಅಲೆಯ (Corona Third Wave) ಅಬ್ಬರ ಆರಂಭವಾಗಿದ್ದರೂ, ಅತ್ಯಂತ ಕಡಿಮೆ ಇದ್ದ ಸೋಂಕಿತರ ಪ್ರಕರಣಗಳು ಕಳೆದೊಂದು ವಾರದಲ್ಲಿ ನಿಧಾನವಾಗಿ ಏರಿಕೆಯಾಗುತ್ತಿದೆ.
ಅದರಲ್ಲಿಯೂ ಕುಕನೂರಿನಲ್ಲಿ ನವೋದಯ ವಿದ್ಯಾಲಯದಲ್ಲಿ (Navodaya Vidyalaya) ಕೊರೊನಾ ಸ್ಫೋಟವಾಗಿದೆ. ಜಿಲ್ಲೆಯಲ್ಲಿ ಕೊರೊನಾ ಅಬ್ಬರಿಸುವ ಸಾಧ್ಯತೆ ಇದೆ, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಕೈಗೊಳ್ಳಬೇಕಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವಾರಂತ್ಯದ ವೇಳೆಗೆ ಜಿಲ್ಲೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 5 ಇತ್ತು. ಈ ವಾರಂತ್ಯಕ್ಕೆ ಜಿಲ್ಲೆಯಲ್ಲಿ ಕೊರೊನಾ ಸಕ್ರಿಯ ಸೋಂಕಿತರ (Corona Active Cases) ಸಂಖ್ಯೆ 155 ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಒಂದೇ ವಾರದಲ್ಲಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 150 ಕ್ಕೇರಿಕೆಯಾಗಿದೆ.