ಬೆಂಗಳೂರು/ರಾಮನಗರ: ಮೇಕೆದಾಟು ಯೋಜನೆಯ ತ್ವರಿತ ಜಾರಿ ಆಗ್ರಹಿಸಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ನಾಯಕರ ದಂಡು ಕನಕಪುರ ತಲುಪಿದೆ.
ರವಿವಾರ ಬೆಳಗ್ಗೆ ಪಾದಯಾತ್ರೆ ಆರಂಭವಾಗಲಿದ್ದು, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಉದ್ಘಾಟಿಸುವರು.
ಕನ್ನಡ ಚಲನಚಿತ್ರೋದ್ಯಮದ ಬೆಂಬಲವೂ ದೊರೆತಿದ್ದು, ನಟ ಶಿವರಾಜ್‌ಕುಮಾರ್, ದುನಿಯಾ ವಿಜಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದಾರೆ.
ಈ ವೇಳೆ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಯಾದರೆ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಚಿಂತಿಸಿದ್ದು ಹೆಚ್ಚಿನ ಪೊಲೀಸ್ ನಿಯೋಜನೆಗೂ ಸೂಚಿಸಿದೆ. ಕಾಂಗ್ರೆಸ್ ನಾಯಕರು ಎಣಿಸಿದಂತೆ ನಡೆಯದಿದ್ದರೆ ಸಂಗಮದ ವೇದಿಕೆ “ಹೈಡ್ರಾಮಾ’ಕ್ಕೆ ಸಾಕ್ಷಿಯಾಗಬಹುದು.
2013ರ ಸೆಪ್ಟಂಬರ್‌ನಲ್ಲೇ ನಾವು ಯೋಜನೆ ಅನುಷ್ಠಾನಕ್ಕಾಗಿ ಪ್ರಯತ್ನ ಪ್ರಾರಂಭಿಸಿದೆವು. ಎರಡೂ ವರೆ ವರ್ಷವಾದರೂ ಬಿಜೆಪಿ ಏನೂ ಮಾಡಿಲ್ಲ. ಯಡಿಯೂರಪ್ಪ ಸಿಎಂ ಆಗಿ ದ್ದಾಗ ಬೊಮ್ಮಾಯಿ ಜಲಸಂಪನ್ಮೂಲ ಸಚಿವರಾಗಿದ್ದರು. ಸುಪ್ರೀಂ ಕೋರ್ಟ್, ಕಾವೇರಿ ಜಲ ಪ್ರಾಧಿಕಾರ, ಹಸುರು ನ್ಯಾಯಾಧಿಕರಣ ಎಲ್ಲಿಯೂ ಯೋಜನೆ ಜಾರಿ ಮಾಡದಂತೆ ತಡೆ ನೀಡಿಲ್ಲ.