ಚೀನಾದ ಯುಟು-2 ರೋವರ್ ಚಂದ್ರನ ಮೇಲೆ ನಿಗೂಢವಾದ ಗುಡಿಸಲು ಆಕಾರದ ವಸ್ತುವನ್ನು ಪತ್ತೆ ಮಾಡಿತ್ತು. ಈ ವಸ್ತು ಏನಿರಬಹುದು ಅಂತ ಇಡೀ ವಿಶ್ವದ ತಜ್ಞರೆಲ್ಲಾ ತಲೆ ಕೆರೆದುಕೊಂಡು ಸಂಶೋಧನೆಯಲ್ಲಿ ಮುಳುಗಿದ್ರು. ಕೆಲವರಂತೂ ಅದು ಏಲಿಯನ್ಗಳು ನಿರ್ಮಿಸಿರೋ ಠಿಕಾಣಿ ಅಂತೆಲ್ಲಾ ಹೇಳಿದ್ರು.
ಇದೀಗ ಚೀನಾದ ಯುಟು-2 ತಂಡವೇ ಈ ಬಗ್ಗೆ ಮಾಹಿತಿ ನೀಡಿದೆ. ಇದು ನಿಗೂಢ ವಸ್ತು ಏನಲ್ಲ.. ನಾವು ರೋವರ್ ಮೂಲಕ ಸೂಕ್ಷ್ಮವಾಗಿ ಪರಿಶೀಲಿಸಿದ್ದೀವಿ. ಇದು ಮೊಲದ ಆಕಾರದಲ್ಲಿರೋ ಒಂದು ಬಂಡೆಕಲ್ಲು ಅಂತ ಹೇಳಿದೆ. ಜೊತೆಗೆ ಅದಕ್ಕೆ ಜೆಡ್ ರ್ಯಾಬಿಟ್ ಅಂತ ಹೆಸರು ಕೂಡ ಇಟ್ಟಿದೆ.