Breaking News

ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ

Spread the love

ಬೆಂಗಳೂರು: ದೇಶಾದ್ಯಂತ ಏರಿಕೆಯಾಗಿದ್ದ ಖಾದ್ಯತೈಲ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡ ಬಳಿಕ ಕಂಪನಿಗಳು ದರ ಇಳಿಕೆ ಮಾಡತೊಡಗಿವೆ.

ದಕ್ಷಿಣ ಭಾರತದ ಪ್ರಮುಖ ಖಾದ್ಯ ತೈಲ ಕಂಪನಿಯಾಗಿರುವ ಸನ್ ಪ್ಯೂರ್ ತನ್ನ ಉತ್ಪನ್ನಗಳ ದರ ಕಡಿಮೆ ಮಾಡಿದೆ.

ಈ ಮೂಲಕ ಸನ್ ಪ್ಯೂರ್ ಬ್ರಾಂಡ್ ಅಡುಗೆ ಎಣ್ಣೆ ಬಳಕೆದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕೇಂದ್ರ ಸರ್ಕಾರ ಆಮದು ಸುಂಕ ಕಡಿತ ಮಾಡಿದ ನಂತರ ಸೂರ್ಯಕಾಂತಿ ಎಣ್ಣೆ ದರ ಇಳಿಕೆ ಹಾದಿಯಲ್ಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಸನ್ ಪ್ಯೂರ್ ಮಾರಾಟ ವಿಭಾಗದ ಮುಖ್ಯಸ್ಥ ಟಿ. ಸುಂದರ್ ಅವರು, ಅಬಕಾರಿ ಸುಂಕ ಇಳಿಕೆ ಮೂಲಕ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿದೆ. ಇದರಿಂದ ಸೂರ್ಯಕಾಂತಿ ಎಣ್ಣೆ ದರ ಇಳಿಕೆಯಾಗಿದ್ದು, ಗ್ರಾಹಕರಿಗೆ ಅನುಕೂಲವಾಗುವಂತೆ ಸನ್ ಪ್ಯೂರ್ ಬ್ರಾಂಡ್ ಅಡುಗೆ ಎಣ್ಣೆ ದರ ಇಳಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಕಲಾ ಪ್ರತಿಭೋತ್ಸವಕ್ಕೆ ಚಾಲನೆ

Spread the love ಕಲಾ ಪ್ರತಿಭೋತ್ಸವಕ್ಕೆ ಚಾಲನೆ ಬೆಳಗಾವಿ. ಜಿಲ್ಲೆಯ ಬಾಲ ಪ್ರತಿಭೆ ಹಾಗೂ ಯುವ ಪ್ರತಿಭೆಗಳಿಗೆ ಜಾನಪದ ಗೀತೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ