Breaking News
Home / ರಾಜಕೀಯ / ಪ್ರಧಾನಿಯ ವಾಹನಕ್ಕೆ ಅಡ್ಡಲಾಗಿ ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ

ಪ್ರಧಾನಿಯ ವಾಹನಕ್ಕೆ ಅಡ್ಡಲಾಗಿ ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ

Spread the love

ಹೊಸದಿಲ್ಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ ನ ಚುನಾವಣಾ ಪ್ರಚಾರಾರ್ಥ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ವೇಳೆ ಪ್ರತಿಭಟನೆಯ ಕಾರಣದಿಂದಾಗಿ ಹಲವು ನಿಮಿಷಗಳ ಕಾಲ ರಸ್ತೆ ಮಧ್ಯೆಯೇ ನಿಂತು ಬಳಿಕ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದ್ದರು.

ಈ ಘಟನೆಯು ಪಂಜಾಬ್‌ ಮುಖ್ಯಮಂತ್ರಿ ʼಭದ್ರತಾ ಲೋಪʼ ಎಸಗಿದ್ದಾರೆ ಎಂಬ ಆರೋಪಕ್ಕೆ ಕಾರಣವಾಗಿತ್ತು. ಆದರೆ ಇದೀಗ ಸಾಮಾಜಿಕ ತಾಣದಾದ್ಯಂತ ಈ ಕುರಿತು ಹಲವು ಹೇಳಿಕೆಗಳು ಮತ್ತು ವೀಡಿಯೋಗಳು ಹರಿದಾಡುತ್ತಿವೆ.

“ಇದು ನಾವೆಲ್ಲರೂ ಖಂಡಿಸಲೇಬೇಕಾದ ಸುದ್ದಿ. ಪಂಜಾಬ್‌ ನಲ್ಲಿನ ದುಷ್ಕರ್ಮಿಗಳು ಪ್ರಧಾನಿಯ ಜೀವಕ್ಕೆ ಬೆದರಿಕೆ ಒಡ್ಡಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ” ಎಂದು ಬಿಜೆಪಿ ನಾಯಕರು ಟ್ವೀಟ್‌ ಮಾಡುತ್ತಿದ್ದರು. ಇನ್ನಿತರ ಟ್ವಿಟರ್‌ ಬಳಕೆದಾರರು ಪ್ರಧಾನಿಯ ವಾಹನಕ್ಕೆ ಅಡ್ಡಲಾಗಿ ಪ್ರತಿಭಟನೆ ಮಾಡುತ್ತಿದ್ದವರ ಕೈಯಲ್ಲಿನ ಬಿಜೆಪಿ ಧ್ವಜವನ್ನು ಬೆಟ್ಟು ಮಾಡಿದ್ದಾರೆ.

ವೀಡಿಯೋ ತುಣುಕಿನಲ್ಲಿ ಪ್ರತಿಭಟನಕಾರರ ಕೈಯಲ್ಲಿ ಬಿಜೆಪಿ ಧ್ವಜವಿರುವುದನ್ನು ಯುವ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ಶ್ರೀನಿವಾಸ್‌ ಬಿ.ವಿ ಟ್ವೀಟ್‌ ಮಾಡಿದ್ದಾರೆ. ಅದಲ್ಲದೇ, ಕಾರ್ಯಕ್ರಮ ಆಯೋಜಿಸಿದ್ದ ಸ್ಥಳಲದಲ್ಲಿ ಇದ್ದ ಬದ್ದ ಕುರ್ಚಿಗಳೆಲ್ಲಾ ಖಾಲಿಯಿದ್ದು, ಇದುವೇ ʼನಿಜವಾದ ಭದ್ರತಾ ಲೋಪʼ ಎಂದು ವ್ಯಂಗ್ಯವಾಡಿದ್ದಾರೆ. ಈ ನಡುವೆ ಪಂಜಾಬ್‌ ಮುಖ್ಯಮಂತ್ರಿ ಚನ್ನಿ, “ಯಾವುದೇ ಭದ್ರತಾ ಲೋಪವೂ ನಮ್ಮಿಂದ ಸಂಭವಿಸಿಲ್ಲ, ಪ್ರಧಾನಿಗೆ ತೊಂದರೆಯಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ” ಎಂದು ಹೇಳಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಬಂಗಾರ ದರ ಮತ್ತೆ ಇಳಿಕೆ

Spread the love 26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ