ಬೆಳಗಾವಿ :- ಗ್ರಾಮ ಪಂಚಾಯತಿ ಅಕ್ರಮ ಬಯಲಿಗೆಳೆದ ವ್ಯಕ್ತಿಯ ಮೇಲೆ ಅಧ್ಯಕ್ಷ ಹಾಗೂ ಬೆಂಬಲಿತ ಸದಸ್ಯರು ಹಲ್ಲೆ ನಡೆಸಿರುವ ಘಟನೆ ಸವದತ್ತಿ ತಾಲೂಕಿನ ಹೂಲಿ ಗ್ರಾಮದಲ್ಲಿ ನಡೆದಿದೆ.
ಸಂಗಪ್ಪ ಗೂಡಗಾರ್ ಎಂಬ ವ್ಯಕ್ತಿಯ ಮೇಲೆ ಹೂಲಿ ಗ್ರಾಮ ಪಂಚಾಯತಿ ಅಧ್ಯಕ್ಷ ವಿರೂಪಾಕ್ಷ ತೊರಗಲ್ ಹಾಗೂ ಆತನ ಬೆಂಬಲಿತ ಸದಸ್ಯರು ಹಲ್ಲೆ ನಡೆಸಿದ್ದಾರೆ.
2020-21ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಗ್ರಾ.ಪಂ ಅಧ್ಯಕ್ಷ ವಿರೂಪಾಕ್ಷ ತೊರಗಲ್, ಪಿಡಿಒ ಫಕ್ಕಿರವ್ವ ಹನಸಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಅಕ್ರಮದ ಬಗ್ಗೆ ತನಿಖೆ ನಡೆಸಿ ಎಂದು ಜಿಲ್ಲಾ ಪಂಚಾಯತಿ ಸಿಇಒ ಅವರಿಗೆ ಸಂಗಪ್ಪ ಗೂಡಗಾರ್ ಮನವಿ ಮಾಡಿದ್ದರು.
ಬಳಿಕ ಜಿ.ಪಂ ಸಿಇಒ ಈ ಅಕ್ರಮದ ತನಿಖೆ ನಡೆಸುವಂತೆ ತಾಲೂಕು ಪಂಚಾಯತಿಗೆ ಸಿಇಒಗೆ ಆದೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ತಾಲೂಕು ಪಂಚಾಯತಿ ಎಡಿ ಸಂಗನೌಡ ಹಂದ್ರಾಳ ನೇತೃತ್ವದಲ್ಲಿ ತನಿಖೆಗೆ ಆಗಮಿಸಿದದ್ದರು. ಅಧಿಕಾರಿಗಳ ಎದುರೇ ಅಧ್ಯಕ್ಷ ವಿರೂಪಾಕ್ಷ ಹಾಗೂ ಬೆಂಬಲಿಗ ಸದಸ್ಯರು, ಸಂಗಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಆದಷ್ಟು ಬೇಗನೆ ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇವರ ಮೇಲೆ ಕಾನೂನು ಕ್ರಮವನ್ನು ತಗೆದುಕೊಳಬೇಕು ಮತ್ತೆ ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಸದಸ್ಯ ಸದಸ್ಯತ್ವವನ್ನು ರದ್ದು ಪಡಿಸಬೇಕು…
ಯಾಕೇದರೆ ಇವರು ಯಾವುದೇ ತಪ್ಪು ಮಾಡಿಲ್ಲ ಅಂದ್ರೆ ತನಿಖೆ ಮಾಡಲು ಬಂದಿರುವ ಅಧಿಕಾರಿಗೆ ತನಿಖೆ ಮಾಡಲು ಸಹಕರಿಸಿ ತಾವು ಯಾವುದೇ ತಪ್ಪು ಮಾಡಿಲ್ಲ ಅಂತಾ ಸಾಬೀತು ಮಾಡಬೇಕಾಗಿತ್ತು ಆದರೆ ಈ ರೀತಿಯಲ್ಲಿ ಹಲ್ಲೆ ಮಾಡುವುದು ತಪ್ಪು ಯಾಕೇದರೆ ಗ್ರಾಮ ಪಂಚಾಯತಿಯಲ್ಲಿ ನಡೆಯುವ ಎಲ್ಲಾ ವ್ಯವಹಾರದ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ನಾಗರಿಕರಿಗೆ ಹಕ್ಕಿಗೆ ತಾನೇ… ಆದಷ್ಟು ಬೇಗನೆ ಬೆಳಗಾವಿ ಜಿಲ್ಲಾ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.
ಆದಷ್ಟು ಬೇಗನೆ ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ಅಧ್ಯಕ್ಷರ ಸದಸ್ಯತ್ವವನ್ನು ರಾದ್ದುಪಡಿಸಬೇಕು ಹಾಗೂ ಹಲ್ಲೆ ಮಾಡಲು ಸಹಕರಿಸಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತೆ ತನಿಖೆ ಮಾಡಲು ಬಂದಿರುವ ತಾಲೂಕಾ ಪಂಚಾಯತಿ ಅಧಿಕಾರಿಗಳನ್ನು ತಕ್ಷಣ ಕೆಲಸ ದಿಂದಾ ಸಸ್ಪೆಂಡ್ ಮಾಡಬೇಕು… ಯಾಕೇದರೆ ಹಲ್ಲೆ ಮಾಡಲು ಇವರೇ ಸಹಕಾರ ನೀಡಿದ್ದಾರೆ ಅಂತಾ ಆ ವಿಡಿಯೋ ನೋಡಿದಾಗ ಗೊತ್ತಾಗುತ್ತದೆ.
✍️ ಚಿನ್ನಪ್ಪ ಕುಂದರಗಿ
ಮಾಹಿತಿ ಹಕ್ಕು ಹೋರಾಟಗಾರ
ಇದಕ್ಕೆ ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದಷ್ಟು ಬೇಗನೆ ಉತ್ತರ ನೀಡಬೇಕು