ಬೆಂಗಳೂರು : ಬೆಂಗಳೂರಲ್ಲಿ ಅಧಿಕಾರಿಗಳ ಮೂಲಕ ಕೋವಿಡ್ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ನೋಡಲ್ ಅಧಿಕಾರಿಗಳಾಗಿ ಐಎಎಸ್, ಐಪಿಎಸ್ ಅಧಿಕಾರಿಗಳ ನೇಮಕ ಮಾಡಿ ಆದೇಶ ಹೊರಡಿಸಿದೆ.
ಅದ್ರಂತೆ, ಏರ್‌ಪೋರ್ಟ್ ಕೋವಿಡ್ ಉಸ್ತುವಾರಿಯನ್ನ ಸಿ.ಶಿಖಾ ಅವ್ರಿಗೆ ನೀಡಲಾಗಿದ್ದು, ಖಾಸಗಿ ವೈದ್ಯ ಸಂಸ್ಥೆಯಲ್ಲಿ ಹಾಸಿಗೆ ಮೀಸಲು ಉಸ್ತುವಾರಿಗಳನ್ನ ನೇಮಿಸಲಾಗಿದೆ.
ಇನ್ನು ಬೆಂಗಳೂರು ಪೂರ್ವ ವಲಯಕ್ಕೆ-1ಕ್ಕೆ ಇಬ್ಬರನ್ನ ನೇಮಕಾತಿ ಮಾಡಲಾಗಿದ್ದು,ಕ್ಯಾ.ಮಣಿವಣ್ಣನ್ ಮತ್ತು ಅಲೋಕ್ ಕುಮಾರ್ ನೇಮಕ ಮಾಡಲಾಗಿದೆ.
ಇನ್ನು ಬೆಂಗಳೂರು ಪೂರ್ವ ವಲಯ-2ಕ್ಕೆ ಇಬ್ಬರ ನೇಮಕಾತಿ ಮಾಡಲಾಗಿದ್ದು, ಮೊಹಮ್ಮದ್ ಮೊಹಿಸಿನ್ ಮತ್ತು ಹರಿಶೇಖರನ್ ನೇಮಕ ಮಾಡಲಾಗಿದೆ. ಇನ್ನು ಮಹದೇವಪುರಕ್ಕೆ ಉಮಾ ಮಹದೇವನ್, ಹಿತೇಂದ್ರ ಮತ್ತು ಪಶ್ಚಿಮ ವಲಯಕ್ಕೆ ಎಂ.ಟಿ.ರೇಜು ಮತ್ತು ಕೆ.ಟಿ ಬಾಲಕೃಷ್ಣ ಅವ್ರನ್ನ ನೇಮಕ ಮಾಡಲಾಗಿದೆ.