Breaking News

ಪ್ರೇಕ್ಷಕರಿಗೆ 10 ಕೋಟಿ ರೂ. ವಾಪಸ್​ ಕೊಡ್ಬೇಕು ಪ್ರೊಡ್ಯೂಸರ್​: ಹಿಂಗಾದ್ರೆ… ಮುಂದೆ ಹೆಂಗೆ ಸ್ವಾಮಿ!

Spread the love

2022ರ ಹೊಸ್ತಿಲಲ್ಲೇ ಬಿಗ್​ ಬಜೆಟ್(Big Budget)​ ಸಿನಿಮಾ ಜನವರಿ 7ರಂದು ‘ಆರ್​​ಆರ್​ಆರ್​​'(RRR) ರಿಲೀಸ್ ಆಗಬೇಕಿತ್ತು. ಎಲ್ಲವೂ ಅಂದುಕೊಂಡತೆ ಆಗಿದ್ದರೆ, ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ‘ಆರ್​​ಆರ್​ಆರ್​’ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ ನಡೆಯಬೇಕಿತ್ತು.

ಇನ್ನೇನು ಕೇವಲ 4 ದಿನದ ಬಳಿಕ ‘ಆರ್​​ಆರ್​ಆರ್​’ ಸಿನಿಮಾ ವಿಶ್ವಾದಾದ್ಯಂತ ಅದ್ಧೂರಿಯಾಗಿ ತೆರೆಕಾಣಬೇಕಿತ್ತು. ಆದರೆ, ಕೊರೋನಾ(Corona) ಅಬ್ಬರಕ್ಕೆ ಇದೀಗ ಎಲ್ಲವೂ ನಿಂತಲ್ಲೇ ನಿಂತಿದೆ. ‘ಆರ್​ಆರ್​ಆರ್​’ ರಿಲೀಸ್​ ದಿನಾಂಕ ಮುಂದೂಡಿಕೆಯಾಗಿದೆ. ಒಂದೂವರೆ ತಿಂಗಳ ಹಿಂದಿನಿಂದಲೇ ಚಿತ್ರತಂಡ ಅದ್ಧೂರಿಯಗಿ ಪ್ರಚಾರ ಮಾಡಿಕೊಂಡು ಬಂದಿದೆ. ಇದೊಂದು ಪ್ಯಾನ್​ ಇಂಡಿಯಾ(Pan India) ಸಿನಿಮಾ ಆಗಿರುವುದರಿಂದ ಪ್ರತಿ ರಾಜ್ಯಕ್ಕೂ ತೆರಳಿ ಪ್ರಚಾರ ಮಾಡಬೇಕು.ಅದರಂತೆ ಎಲ್ಲ ಕಾರ್ಯವೂ ನಡೆಯುತ್ತಿತ್ತು. ಆದರೆ, ಚಿತ್ರತಂಡ ಕೊಟ್ಟ ಶಾಕ್​ನಿಂದ ಸಿನಿರಸಿಕರಿಗೆ ಭಾರೀ ನಿರಾಸೆಯಾಗಿದೆ. ಹೊಸ ವರ್ಷದಲ್ಲೇ ಸಂಕಷ್ಟ ಎದುರಾದರೆ ಮುಂದೆ ಹೇಗೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಕೆಲ ಕಡೆ ಚಿತ್ರದ ಮುಂಗಡ ಟಿಕೆಟ್​(Pre Ticket Booking) ಕೂಡ ಸೇಲ್​ ಆಗಿತ್ತು. ಆದರೆ, ಈಗ ‘ಆರ್​​ಆರ್​ಆರ್​’​​ ರಿಲೀಸ್​ ಡೇಟ್​ ಅಧಿಕೃತವಾಗಿ ಮುಂದೂಡಿಕೆ(RRR Release Date Postponed)ಯಾಗಿದೆ. ಈ ವಿಚಾರ ಸಿನಿಮಾ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಇದರ ಜೊತೆಗೆ ಇದೀಗ ಪ್ರೇಕ್ಷಕರಿಗೆ ‘ಆರ್​ಆರ್​ಆರ್​’ ಸಿನಿಮಾದ ನಿರ್ಮಾಪಕರು 10 ಕೋಟಿ ರೂಪಾಯಿಗಳನ್ನು ವಾಪಸ್​ ನೀಡಬೇಕು. ಯಾಕೆ ಅಂತೀರಾ? ಮುಂದೆ ಇದೆ ನೋಡಿ…

10 ಕೋಟಿ ರೂ. ಮೊತ್ತದ ಟಿಕೆಟ್​ ಬುಕ್​ ಆಗಿತ್ತು!

ಜೂನಿಯರ್​ ಎನ್​ಟಿಆರ್​, ರಾಮಚರಣ್​ ಒಟ್ಟಿಗೆ ಅಭಿನಯಿಸಿರುವ ‘ಆರ್​ಆರ್​ಆರ್’​ ಚಿತ್ರದ ಬಗ್ಗೆ ದೊಡ್ಡ ಕ್ರೇಜ್​ ಸೃಷ್ಟಿ ಆಗಿದೆ. ಸಿನಿಮಾ ಮೇಲಿರುವ ನಿರೀಕ್ಷೆ ದುಪ್ಪಟ್ಟಾಗಿತ್ತು. ಚಿತ್ರ ನೋಡಲು ಸಿನಿರಸಿಕರು ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದರು. ಆದರೆ, ಈಗ ಅವರಿಗೆ ನಿರಾಸೆ ಮೂಡಿಸಿದೆ. ಜನವರಿ 7ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಅದಕ್ಕಾಗಿ ಹಲವು ಕಡೆ ಮುಂಗಡ ಟಿಕೆಟ್​ ಬುಕ್ಕಿಂಗ್​ ಸಹ ಆರಂಭವಾಗಿತ್ತು. ವಿಶ್ವದಾದ್ಯಂತ ಅಂದಾಜು 10 ಕೋಟಿ ರೂಪಾಯಿ ಮೌಲ್ಯದ ಟಿಕೆಟ್​ ಬುಕ್​ ಆಗಿತ್ತು ಎಂದು ಹೇಳಲಾಗುತ್ತಿದೆ. ಇದೀಗ ಸಿನಿಮಾ ರಿಲೀಸ್ ದಿನಾಂಕ ಪೋಸ್ಟ್​ಪೋನ್​ ಆಗಿರುವುದರಿಂದ ಆ ಹಣವನ್ನು ಪ್ರೇಕ್ಷಕರಿಗೆ ವಾಪಸ್​ ನೀಡಬೇಕು.

ಇದನ್ನು : ಹೊಸ ವರ್ಷದಲ್ಲೇ ಸಿನಿರಸಿಕರಿಗೆ ಭಾರೀ ನಿರಾಸೆ: `ಆರ್​ಆರ್​ಆರ್​’ ಸಿನಿಮಾ ರಿಲೀಸ್​​ ಡೇಟ್​ ಮುಂದೂಡಿಕೆ!

ರೈಟ್ ಟೈಂನಲ್ಲಿ ಬಿಡುಗಡೆ ಮಾಡಿ ಅಂತಿದ್ದಾರೆ ಪಂಡಿತರು!

ಈ 10 ಕೋಟಿ ರೂಪಾಯಿ ವಾಪಸ್​ ನೀಡುವುದರಿಂದ ಸಿನಿಮಾದ ನಿರ್ಮಾಪಕರಿಗೆ ಯಾವುದೇ ರೀತಿಯ ಲಾಸ್​ ಇಲ್ಲ. ಈ ಸಿನಿಮಾ ಮೇಲಿರುವ ಕ್ರೇಜ್​ನಿಂದ ಪ್ರೇಕ್ಷಕರು. ಮುಂಗಡವಾಗಿ ಸಿನಿಮಾ ಟಿಕೆಟ್​ ಬುಕ್​ ಮಾಡಿದ್ದರು. ಇದೀಗ ಈ ಹಣವನ್ನು ಹಿಂದಿರುಗಿಸುವುದರಿಂದ ಸಿನಿಮಾಗೆ ಕಂಡಿತವಾಗಿಯೂ ಯಾವುದೇ ನಷ್ಟ ಇಲ್ಲ. ಆದರೆ, ಸರಿಯಾದ ಟೈಂ ನೋಡಿ ಸಿನಿಮಾ ರಿಲೀಸ್ ಮಾಡಬೇಕು. ಆಗ ಕಲೆಕ್ಷನ್​ ತುಂಬಾ ಚೆನ್ನಾಗಿ ಆಗುತ್ತೆ ಅಂತ ಸಿನಿಮಾ ಪಂಡಿತರು ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಇದನ್ನು : ಅಂತೆ-ಕಂತೆಗಳಿಗೆ ಫುಲ್​ಸ್ಟಾಪ್​ ಇಟ್ಟ `ರಾಧೆ ಶ್ಯಾಮ್​’: ಹೇಳಿದ್​ ಡೇಟ್​ಗೆ ಸಿನಿಮಾ ರಿಲೀಸ್​!

ಹೊಸ ವರ್ಷದಲ್ಲೇ ಸಿನಿರಸಿಕರಿಗೆ ಶಾಕ್​!

ಆರ್​​ಆರ್​ಆರ್​ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದು, ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ಭೂಮಿಕೆಯಲ್ಲಿ ನಟಿಸಿದ್ದಾರೆ. ಆದಷ್ಟು ಬೇಗ ಈ ಚಿತ್ರವನ್ನು ನೋಡಬೇಕು ಎಂದು ಕಾಯುತ್ತಿದ್ದ ಸಿನಿಪ್ರಿಯರಿಗೆ ನಿರಾಸೆ ಆಗಿದೆ. ಟೀಸರ್​, ಸಾಂಗ್ಸ್​​, ಟ್ರೈಲರ್​​ನಿಂದಲೇ ಆರ್​​ಆರ್​ಆರ್​ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಚಿತ್ರಮಂದಿರಗಳಲ್ಲಿ ಮತ್ತೆ ಈ ಸಿನಿಮಾ ಮೂಲಕ ಅಸಲಿ ಹಬ್ಬ ಎಂದರೇ ಏನು ಎಂದು ತೋರಿಸೋಣ ಅಂದುಕೊಂಡಿದ್ದ ಅಭಿಮಾನಿಗಳಿಗೆ ನಿಜಕ್ಕೂ ಶಾಕ್​ ಆಗಿದೆ. ನಟಿ ಆಲಿಯಾ ಭಟ್​ ಅವರು ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಜಯ್​ ದೇವಗನ್​ ಅವರು ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


Spread the love

About Laxminews 24x7

Check Also

ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ

Spread the love ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ