Breaking News

ವಾಹನಕ್ಕೆ 100, 200 ರೂಪಾಯಿಯ ಪೆಟ್ರೋಲ್ ಹಾಕಿಸ್ತೀರಾ? ಹಾಗಿದ್ರೆ ನೀವು ಮೋಸ ಹೋಗಿದ್ದೀರಾ!

Spread the love

ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಗಳು (Price) ಗಗನ ಮುಟ್ಟುತ್ತಿದ್ದು, ಕೆಲವರಂತೂ ಈ ಸಮಯದಲ್ಲಿ ಎಲೆಕ್ಟ್ರಿಕ್​ ವಾಹನದತ್ತ (Electric Vehicle) ಚಿತ್ತ ಹರಿಸಿದ್ದಾರೆ. ಇನ್ನು ಕೆಲವರು ಇಂಧನ ಬಳಕೆಯ ವಾಹನವನ್ನೇ ಬಳಸುತ್ತಿದ್ದಾರೆ.

ಬೈಕ್ (Bike)​, ಸ್ಕೂಟರ್​ಗಳಿಗೆ (Scooter) ಪೆಟ್ರೋಲ್ ಅವಶ್ಯಕ. ಹೀಗಾಗಿ ಪೆಟ್ರೋಲ್​ಗೆಂದು ಪಂಪ್​​ಗೆ ತೆರಳಿ ಇಂಧನ ಹಾಕಿಸಿಕೊಳ್ಳುತ್ತೇವೆ. ಆದರೆ ಪೆಟ್ರೋಲ್​ ಪಂಪ್​ನಲ್ಲಿ ಕೆಲವೊಮ್ಮೆ ಗ್ರಾಹಕರನಿಗೆ ತಿಳಿಯದೇ ಮೋಸ (Cheating) ನಡೆದು ಹೋಗುತ್ತದೆ. ಹಾಗಾಗಿ ಇಂತಹ ವಂಚನೆಗೆ ಬಳಿಯಾಗುವ ಮುನ್ನ ಗ್ರಾಹಕರು ಎಚ್ಚರದಿಂದ ಇರುವುದು ಒಳಿತು.

-ಹೆಚ್ಚಿನ ಜನರು ಪೆಟ್ರೋಲ್ ಪಂಪ್‌ಗೆ ಹೋಗಿ 100, 200 ಮತ್ತು 500 ರೂ.ವಿನ ಪೆಟ್ರೋಲ್​ ತುಂಬಿಸಲು ಆರ್ಡರ್ ಮಾಡುತ್ತಾರೆ. ಅನೇಕ ಬಾರಿ ಪೆಟ್ರೋಲ್ ಪಂಪ್ ಮಾಲೀಕರು ರೌಂಡ್ ಫಿಗರ್ ಅನ್ನು ಯಂತ್ರದಲ್ಲಿ ಫಿಕ್ಸ್ ಮಾಡುತ್ತಾರೆ. ಈ ಸಮಯದಲ್ಲಿ ಗ್ರಾಹಕರು ಬಲಿಪಶುವಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಪೆಟ್ರೋಲ್​ ಹಾಕುವಾಗ ರೌಂಡ್ ಫಿಗರ್‌ನಲ್ಲಿ ಪೆಟ್ರೋಲ್ ತುಂಬಿಸದಿರುವುದು ಮುಖ್ಯವಾಗಿದೆ. ರೌಂಡ್ ಫಿಗರ್‌ಗಿಂತ 10-20 ರೂ.ಗೆ ಪೆಟ್ರೋಲ್ ತೆಗೆದುಕೊಳ್ಳಬಹುದು.

-ಬೈಕ್ ಅಥವಾ ಕಾರಿನ ಖಾಲಿ ಟ್ಯಾಂಕ್‌ಗೆ ಪೆಟ್ರೋಲ್ ತುಂಬಿಸುವುದರಿಂದ ಗ್ರಾಹಕರಿಗೆ ನಷ್ಟವಾಗುತ್ತದೆ. ಇದಕ್ಕೆ ಕಾರಣವೆಂದರೆ ನಿಮ್ಮ ಕಾರಿನ ಟ್ಯಾಂಕ್ ಖಾಲಿಯಾದಷ್ಟೂ ಗಾಳಿ ಅದರಲ್ಲಿ ಉಳಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪೆಟ್ರೋಲ್ ತುಂಬಿದ ನಂತರ ಗಾಳಿಯಿಂದಾಗಿ ಪೆಟ್ರೋಲ್ ಪ್ರಮಾಣ ಕಡಿಮೆಯಾಗುತ್ತದೆ. ಯಾವಾಗಲೂ ಕನಿಷ್ಠ ಅರ್ಧದಷ್ಟು ಟ್ಯಾಂಕ್ ಪೆಟ್ರೋಲ್​ ತುಂಬಿರಬೇಕು.

-ಪೆಟ್ರೋಲ್ ಕದಿಯಲು ಪಂಪ್ ಮಾಲೀಕರು ಮುಂಚಿತವಾಗಿಯೇ ಮೀಟರ್ ತಪ್ಪು ಅಂಕೆಗಳೊಂದಿಗೆ ಜೋಡಿಸಿರುತ್ತಾರೆ. ತಜ್ಞರ ಪ್ರಕಾರ, ದೇಶದ ಅನೇಕ ಪೆಟ್ರೋಲ್ ಪಂಪ್‌ಗಳು ಇನ್ನೂ ಹಳೆಯ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೊಸ ತಂತ್ರಜ್ನಾನ ಅಳವಡಿಸಿರುವ ಪೆಟ್ರೋಲ್​ ಪಂಪ್​ನಲ್ಲಿ ಇಂಧನ ತುಂಬಿಸಿ. ಮಾತ್ರವಲ್ಲದೆ ನಿರಂತರವಾಗಿ ವಾಹನದ ಮೈಲೇಜ್ ಅನ್ನು ಪರಿಶೀಲಿಸುತ್ತಿರಿ.

-ಪೆಟ್ರೋಲ್ ಅನ್ನು ಯಾವಾಗಲೂ ಡಿಜಿಟಲ್ ಮೀಟರ್ ಪಂಪ್‌ನಲ್ಲಿ ಮಾತ್ರ ತುಂಬಿಸಬೇಕು. ಇದಕ್ಕೆ ಕಾರಣ ಹಳೆಯ ಪೆಟ್ರೋಲ್ ಪಂಪ್‌ಗಳಲ್ಲಿರುವ ಯಂತ್ರಗಳು ಸಹ ಹಳೆಯದಾಗಿದ್ದು, ಈ ಯಂತ್ರಗಳಿಗೆ ಕಡಿಮೆ ಪೆಟ್ರೋಲ್ ತುಂಬುತ್ತವೆ.

-ಅನೇಕ ಪೆಟ್ರೋಲ್ ಪಂಪ್‌ಗಳಲ್ಲಿನ ಉದ್ಯೋಗಿಗಳು ನೀವು ಹೇಳಿದ ಮೊತ್ತಕ್ಕಿಂತ ಕಡಿಮೆ ಬೆಲೆಗೆ ತೈಲವನ್ನು ತುಂಬುತ್ತಾರೆ. ಕೆಲವೊಮ್ಮೆ ಮೀಟರ್ ಅನ್ನು ಶೂನ್ಯಕ್ಕೆ ಮರುಹೊಂದಿಸಲಾಗುತ್ತದೆ. ಆದರೆ ಈ ವೇಳೆ ಸರಿಯಾಗಿ ಗಮನಿಸುವುದು ಮುಖ್ಯ. ಒಂದು ವೇಳೆ ನಿಮಗೆ ಗೊತ್ತಿಲ್ಲದಂತೆ ಪೆಟ್ರೋಲ್​ ತುಂಬಿಸಿ ಬಿಡುತ್ತಾರೆ. ಹಾಗಾಗುವ ಮುನ್ನ ಎಚ್ಚರದಿಂದ ಇರುವುದು ಮುಖ್ಯ.

ಇದನ್ನು : Safest Cars: 2021ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಅತ್ಯಂತ ಸುರಕ್ಷಿತ ಕಾರುಗಳು ಯಾವುವು ಗೊತ್ತಾ..?

-ಹೆಚ್ಚಿನ ಜನರು ತಮ್ಮ ಕಾರಿಗೆ ಇಂಧನ ತುಂಬುವಾಗ ಕಾರಿನಿಂದ ಇಳಿಯುವುದಿಲ್ಲ. ಈ ಸಮಯದಲ್ಲಿ ಪೆಟ್ರೋಲ್ ಪಂಪ್ ನೌಕರರು ಇದರ ಲಾಭ ಪಡೆಯುತ್ತಾರೆ. ಪೆಟ್ರೋಲ್ ತುಂಬಿಸುವಾಗ ವಾಹನದಿಂದ ಕೆಳಗಿಳಿದು ಮೀಟರ್ ಬಳಿ ನಿಲ್ಲಬೇಕು.

-ಪೆಟ್ರೋಲ್ ಪಂಪ್‌ಗಳಲ್ಲಿ ತೈಲ ತುಂಬುವ ಪೈಪ್ ಅನ್ನು ಉದ್ದವಾಗಿ ಇರಿಸಲಾಗುತ್ತದೆ. ಪೆಟ್ರೊಲ್ ಸುರಿದ ನಂತರ ಆಟೊ ಕಟ್ ಆದ ತಕ್ಷಣ ನೌಕರರು ವಾಹನದಿಂದ ನಳಿಕೆ ಹೊರತೆಗೆಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಪೈಪ್​ನಲ್ಲಿ ಉಳಿದ ಪೆಟ್ರೋಲ್ ಪ್ರತಿ ಬಾರಿ ಟ್ಯಾಂಕ್​​ಗೆ ಹೋಗುತ್ತದೆ. ಆಟೋ ಕಟ್ ಮಾಡಿದ ನಂತರ ನಿಮ್ಮ ವಾಹನದ ಟ್ಯಾಂಕ್‌ನಲ್ಲಿ ಕೆಲವು ಸೆಕೆಂಡುಗಳ ಕಾಲ ಪೆಟ್ರೋಲ್‌ನ ನಳಿಕೆಯು ಉಳಿಯಬೇಕು, ಇದರಿಂದ ಪೈಪ್‌ನಲ್ಲಿ ಉಳಿದಿರುವ ಪೆಟ್ರೋಲ್ ಕೂಡ ಅದರೊಳಗೆ ಬರುತ್ತದೆ.

ಇದನ್ನು : BSNL: ಅನಿಯಮಿತ ಡೇಟಾ, 425 ದಿನಗಳ ವ್ಯಾಲಿಡಿಟಿ.. ಈ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಸಿಗಲಿದೆ ಭರ್ಜರಿ ಕೊಡುಗೆ

ಪೆಟ್ರೋಲ್ ಹಾಕುವಾಗ ಇಂತಹ ಸಂಗತಿಗಳುನ್ನು ಸೂಕ್ಷ್ಮವಾಗಿ ಗಮನಹರಿಸುವುದು ಮುಖ್ಯ. ಏಕೆಂದರೆ ಗಗನಕ್ಕೇರಿರುವ ಪೆಟ್ರೋಲ್​ ಬೆಲೆಯ ಜೊತೆಗೆ ಪೆಟ್ರೋಳ್​ ಪಂಪ್​ಗಳಲ್ಲಿ ವಂಚನೆ ಕೂಡ ನಡೆಯುತ್ತಿದೆ. ಕೊಡುಗೆ ಹಣಕ್ಕೆ ಸರಿಯಾಗಿ ವರ್ತಿಸದೆ ಪೆಟ್ರೋಲ್ ಕದಿಯುವವರು ಇದ್ದಾರೆ. ಹಾಗಾಗಿ ಎಚ್ಚರದಿಂದ ಇದ್ದು, ಪೆಟ್ರೋಲ್​ ಹಾಕುವುದು ಉತ್ತಮ


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ