ಬೆಂಗಳೂರು: ತುಮಕೂರಿನಲ್ಲಿ ಕ್ರಿಸ್‌ಮಸ್ ಆಚರಣೆಯನ್ನು ಪ್ರಶ್ನಿಸಿ ಗಲಾಟೆ ಮಾಡಿದ ಬಲಪಂಥೀಯರ ವಿರುದ್ಧ ಮಹಿಳೆಯರ ಗುಂಪು ಸಿಡಿದೆದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಿಂದುತ್ವವಾದಿಗಳು ಎಂದು ಹೇಳಿಕೊಂಡು ಬಂದ ಗುಂಪೊಂದು ಕ್ರಿಸ್‌ಮಸ್ ಆಚರಿಸಿದ್ದಕ್ಕೆ ತುಮಕೂರಿನ ದಲಿತರ ಮನೆಗೆ ನುಗ್ಗಿ ಗಲಾಟೆ ಮಾಡಿತ್ತು. ಅವರಿಗೆ ಎದುರಾಗಿ ಮಹಿಳೆಯರು ಕೂಡ ಗಲಾಟೆ ಮಾಡಿದ್ದು, ಬಳಿಕ ಪೊಲೀಸರು ಬಂದು ಪರಿಸ್ಥಿತಿಯನ್ನು ಶಾಂತಗೊಳಿಸಿದರು.
Tumakuru. Women fight off Hindutva vigilantes who disrupted Christmas celebrations in Kunigal. The mob is asking the women why they are not wearing sindhoor like Hindus and why they are celebrating Christmas. Women respond saying they are Christian believers and wish to celebrate pic.twitter.com/Q9dR9muMaA
— Prajwal (@prajwalmanipal) December 30, 2021
ತುಮಕೂರಿನಲ್ಲಿ ದಲಿತರ ಮನೆಯೊಂದರ ಮನೆಗೆ ನುಗ್ಗಿದ ಹಿಂದುತ್ವವಾದಿಗಳ ಗುಂಪೊಂದು ಮಂಗಳವಾರ ಕ್ರಿಸ್‌ಮಸ್ ಕಾರ್ಯಕ್ರಮವನ್ನು ಆಚರಿಸದಂತೆ ತಡೆಯಲು ಯತ್ನಿಸಿದರು. ಅದನ್ನು ಆ ದಲಿತರ ಮನೆಯ ಮಹಿಳೆಯರು ತಡೆದರು. ಈ ಘಟನೆಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಕೊನೆಗೆ ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರನ್ನು ಮನೆಗೆ ಕರೆಸಲಾಯಿತು. ಆದರೆ ಈ ವಾಗ್ವಾದದ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ತುಮಕೂರಿನ ಕುಣಿಗಲ್ ತಾಲೂಕಿನ ಬಿಳಿದೇವಾಲಯ ಗ್ರಾಮದಲ್ಲಿ ಮಂಗಳವಾರ ಸಂಜೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ವಾದ-ವಿವಾದದಲ್ಲಿ ಭಾಗಿಯಾದ ಎರಡೂ ಗುಂಪುಗಳಿಂದ ದೂರುಗಳಿದ್ದರೂ ಪ್ರಕರಣ ದಾಖಲಾಗಿಲ್ಲ ಎಂದು ಕುಣಿಗಲ್ ಠಾಣೆಯ ಪೊಲೀಸ್ ನಿರೀಕ್ಷಕ ರಾಜು ಪಿ. ತಿಳಿಸಿದ್ದಾರೆ. ಆ ಕುಟುಂಬವು ಕ್ರಿಸ್‌ಮಸ್ ಆಚರಿಸುತ್ತಿತ್ತು. ಆದರೆ, ಕೆಲವು ಪುರುಷರು ಅಲ್ಲಿಗೆ ಹೋಗಿ ಅಡ್ಡಿಪಡಿಸಿದ್ದಾರೆ. ಇದು ಕೇವಲ ವಾದವಾಗಿದೆ ಮತ್ತು ಯಾವುದೇ ಹಿಂಸಾಚಾರ ನಡೆದಿಲ್ಲ. ನಾವು ಪ್ರಕರಣವನ್ನು ದಾಖಲಿಸಿಲ್ಲ. ಈ ಬಗ್ಗೆ ಪೊಲೀಸ್ ಇನ್ಸ್ಪೆಕ್ಟರ್ ರಾಜು ತಿಳಿಸಿದ್ದಾರೆ.