Breaking News

ಕರ್ನಾಟಕ ಸಹಿತ ಆರು ರಾಜ್ಯಗಳಿಗೆ ಕೇಂದ್ರದಿಂದ ಹೆಚ್ಚುವರಿ ಅನುದಾನ

Spread the love

ಹೊಸದಿಲ್ಲಿ: ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (ಎನ್.ಡಿ.ಆರ್.ಎಫ್.) ಅಡಿಯಲ್ಲಿ 2021ರ ಸಾಲಿನಲ್ಲಿ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಿಂದ ಬಾಧಿತವಾದ ಆರು ರಾಜ್ಯಗಳಿಗೆ ಕೇಂದ್ರ ಹೆಚ್ಚುವರಿ ನೆರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆ (ಎಚ್.ಎಲ್.ಸಿ.) ಅನುಮೋದಿಸಿದೆ.

‘ತೌಕ್ತೆ’ ಚಂಡಮಾರುತ ಹಿನ್ನೆಲೆಯಲ್ಲಿ ಗುಜರಾತ್‌ಗೆ ₹ 1,133.35 ಕೋಟಿಯನ್ನು, ‘ಯಾಸ್’ ಚಂಡಮಾರುತ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳಕ್ಕೆ ₹ 586.59 ಕೋಟಿ, 2021ರ ಮುಂಗಾರು ಋತುವಿನಲ್ಲಿ ಪ್ರವಾಹ /ಭೂಕುಸಿತ ಹಿನ್ನೆಲೆಯಲ್ಲಿ ಅಸ್ಸಾಂಗೆ ₹ 51.53 ಕೋಟಿ, ಕರ್ನಾಟಕಕ್ಕೆ ₹ 504.06 ಕೋಟಿ, ಮಧ್ಯಪ್ರದೇಶಕ್ಕೆ ₹ 600.50 ಕೋಟಿ ಮತ್ತು ಉತ್ತರಖಂಡಕ್ಕೆ ₹ 187.18 ಕೋಟಿ ಸೇರಿ ಒಟ್ಟು ₹ 3,063.21 ಕೋಟಿ ಹೆಚ್ಚುವರಿ ಕೇಂದ್ರೀಯ ನೆರವನ್ನು ಎನ್.ಡಿ.ಆರ್.ಎಫ್.ನಿಂದ ಅನುಮೋದಿಸಲಾಗಿದೆ.

ಈ ಹೆಚ್ಚುವರಿ ನೆರವು, ಈಗಾಗಲೇ ರಾಜ್ಯಗಳಿಗೆ ರಾಜ್ಯ ವಿಪತ್ತು ಸ್ಪಂದನಾ ನಿಧಿ (ಎಸ್.ಡಿ.ಆರ್.ಎಫ್.)ನಡಿ ರಾಜ್ಯಗಳಿಗೆ ಕೇಂದ್ರವು ಬಿಡುಗಡೆ ಮಾಡಲಾಗಿರುವ ನಿಧಿಗಿಂತ ಹೆಚ್ಚುವರಿಯಾದುದಾಗಿದೆ.

2021-22ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರಕಾರ 28 ರಾಜ್ಯಗಳಿಗೆ ಎಸ್.ಡಿ.ಆರ್.ಎಫ್.ನಡಿ ₹ 17,757.20 ಕೋಟಿ ಬಿಡುಗಡೆ ಮಾಡಿದ್ದರೆ, ಎನ್.ಡಿ.ಆರ್.ಎಫ್.ನಿಂದ 7 ರಾಜ್ಯಗಳಿಗೆ ₹ 3542.54 ಕೋಟಿ ಬಿಡುಗಡೆ ಮಾಡಿದೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ