ಬೆಂಗಳೂರು: ಮೂವರು ಮಚ್ಚಿನೇಟಿಗೆ ಬಲಿಯಾಗಿದ್ದ ಮಹಿಳೆ ಅರ್ಚನಾ ರೆಡ್ಡಿ(38) ಸಾವಿನ ಹಿಂದೆ ಅನೇಕ ಅನುಮಾನಗಳು ಹುಟ್ಟಿ ಕೊಂಡಿದ್ದವು. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರ್ಚನಾ ರೆಡ್ಡಿ ಅವರ ಮೂರನೇ ಪತಿ ನವೀನ್, ಸೇರಿ ಇಬ್ಬರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ನಗರದ ಹೊಸೂರು ರಸ್ತೆಯ ಹೊಸರೋಡ್ ಜಂಕ್ಷನ್ ಬಳಿ ನಿನ್ನೆ ನಡೆದಿದ್ದ ಅರ್ಚನಾ ರೆಡ್ಡಿ ಎಂಬ ಮಹಿ ಳೆಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಲಭ್ಯವಾಗಿದೆ.
ಮಗಳ ಅಕ್ರಮ ಸಂಬಂಧವೇ ಹತ್ಯೆಗೆ ಕಾರಣವಾಯ್ತಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಮೃತ ಅರ್ಚನಾಳನ್ನು ಎರಡನೇ ಮದುವೆಯಾಗಿದ್ದ ನವೀನ್, ಅರ್ಚನಾ ಜಗಳವಾಡಿ ದೂರ ಆಗುತ್ತಿದ್ದಂತೆ. ಆಕೆಯ ಮಗಳ ಜೊತೆ ಸಲುಗೆ ಬೆಳೆಸಿದ್ದ ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಕ್ಕನ ಜೊತೆ ಆರೋಪಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಅರ್ಚನಾ ಪುತ್ರ ತ್ರಿವೇದ್ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ಕೂಡ ಸಲ್ಲಿಸಿದ್ದರಂತೆ. ನನ್ನ ಅಕ್ಕನ ಜೊತೆ ನವೀನ್ ಅಕ್ರಮ ಸಂಬಂಧ ಹೊಂದಿದ್ದ ಇದನ್ನು ನಮ್ಮ ತಾಯಿ ಅರ್ಚನಾ ಪ್ರಶ್ನೆ ಮಾಡಿದ್ದರು.
ಹೀಗಾಗಿ ನವೀನ್ ಕೋಪಗೊಂಡು ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಅರ್ಚನಾ ರೆಡ್ಡಿ ಪುತ್ರ ಆರೋಪಿಸಿದ್ದಾರೆ. ಇನ್ನು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆಸ್ತಿಗಾಗಿ ಅರ್ಚನಾ ಮಗಳನ್ನೇ ಬಳಸಿಕೊಂಡು ಆರೋಪಿ ನವೀನ್ ಕೊಲೆ ಮಾಡಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗುತ್ತಿದೆ. ಇನ್ನು ಪ್ರಕರಣದ ಜಾಡು ಹಿಡಿದು ಬಲೆ ಬೀಸಿರುವ ಎಲೆಕ್ಟ್ರಾನಿಕ್ ಸಿಟಿ ಪೋಲಿಸರು ಎರಡನೇ ಪತಿ ನವೀನ್ ಹಾಗೂ ಅನೂಪ್ ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.