ಹಾವೇರಿ: ರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪಶು ಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ನಿರ್ವಹಣಾ ವೆಚ್ಚ ಭರಿಸಲು ರಾಷ್ಟ್ರಿಕೃತ ಬ್ಯಾಂಕ್, ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲು ನವಂಬರ್ 15 ರಿಂದ ಫೆಬ್ರುವರಿ 15ರವರೆಗೆ ಹೊಸ ಕಿಸಾನ ಕ್ರೆಡಿಟ್ ಕಾರ್ಡ್‍ಗಳನ್ನು ವಿತರಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಆಸಕ್ತ ರೈತರು ಹತ್ತಿರದ ಪಶುವೈದ್ಯಕೀಯ ಸಂಸ್ಥೆಯಲ್ಲಿ ಅರ್ಜಿ ನಮೂನೆ ಪಡೆದು ಆಧಾರ್, ಪಹಣಿ ಪತ್ರ, ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕಿನ ಹೆಸರು, ಶಾಖೆ ಮತ್ತು ಐ.ಎಫ್.ಎಸ್.ಸಿ. ಕೋಡ್‍ನೊಂದಿಗೆ ಬ್ಯಾಂಕ್ ಖಾತೆ ವಿವರಗಳನ್ನು ಮತ್ತು ಭಾವಚಿತ್ರದೊಂದಿಗೆ ಅಗತ್ಯ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು.
ಹೈನುಗಾರಿಕೆ: ಮಿಶ್ರತಳಿ ದನಗಳ ನಿರ್ವಹಣೆ(1+1)ಗೆ ಪ್ರತಿ ಹಸುವಿಗೆ ಗರಿಷ್ಠ ರೂ.14 ಸಾವಿರ, ಎರಡು ಹಸುಗಳಿಗೆ ರೂ.28 ಸಾವಿರ ಸಾಲ ಸೌಲಭ್ಯ ಹಾಗೂ ಸುಧಾರಿತ ಎಮ್ಮೆಗಳ ನಿರ್ವಹಣೆ(1+1)ಗೆ ಪ್ರತಿ ಎಮ್ಮೆಗೆ ಗರಿಷ್ಠ ರೂ.16 ಸಾವಿರ, ಎರಡು ಎಮ್ಮೆಗಳಿಗೆ ರೂ.32 ಸಾವಿರ ಸಾಲ ಸೌಲಭ್ಯವಿದೆ.
ಕುರಿ ಸಾಕಾಣಿಕೆ: ಕುರಿಗಳ ನಿರ್ವಹಣೆ(10+01) ಕಟ್ಟಿಮೇಯಿಸುವ ಕುರಿಗಳಿಗೆ ರೂ.24 ಸಾವಿರ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳೀಗೆ ರೂ.12 ಸಾವಿರ ಸಾಲ ಸೌಲಭ್ಯ, ಕುರಿಗಳ ನಿರ್ವಹಣೆ(20+01) ಕಟ್ಟಿಮೇಯಿಸುವ ಕುರಿಗಳಿಗೆ ರೂ.48 ಸಾವಿರ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ.24 ಸಾವಿರ ಸಾಲ ಸೌಲಭ್ಯ, ಟಗರುಗಳ ನಿರ್ವಹಣೆ(10) ರೂ.13 ಸಾವಿರ ಹಾಗೂ ಟಗರುಗಳ ನಿರ್ವಹಣೆ(20) ರೂ.26 ಸಾವಿರ ಸಾಲ ಸೌಲಭ್ಯವಿದೆ.
ಮೇಕೆಗಳ ಸಾಕಾಣಿಕೆ: ಮೇಕೆಗಳ ನಿರ್ವಹಣೆ(10+01) ಕಟ್ಟಿಮೇಯಿಸುವ ಮೇಕೆಗಳಿಗೆ ರೂ.24 ಸಾವಿರ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ ರೂ.13 ಸಾವಿರ ಸಾಲ ಸೌಲಭ್ಯ, ಮೇಕೆಗಳಿಗೆ ನಿರ್ವಹಣೆ(20+01) ಕಟ್ಟಿಮೇಯಿಸುವ ಮೇಕೆಗಳಿಗೆ ರೂ.48 ಸಾವಿರ ಹಾಗೂ ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ ರೂ.26 ಸಾವಿರ ಸಾಲ ಸೌಲಭ್ಯವಿದೆ. ಹಂದಿ ಸಾಕಾಣಿಕೆ(10) ರೂ.60 ಸಾವಿರ ಸಾಲ ಸೌಲಭ್ಯವಿದೆ.
ಕೋಳಿ ಸಾಕಾಣಿಕೆ: ಮಾಂಸದ ಕೋಳಿ ಸಾಕಣಿಕೆಗೆ 2000 ಕೋಳಿಗಳಿಗೆ ಗರಿಷ್ಠ ರೂ.1.60 ಲಕ್ಷ ಹಾಗೂ ಮೊಟ್ಟೆ ಕೋಳಿ ಸಾಕಾಣಿಕೆಗೆ 1000ಕೋಳಿಗಳಿಗೆ ಗರಿಷ್ಠ ರೂ.1.80 ಲಕ್ಷವರೆಗೆ ಸಾಲ ಸೌಲಭ್ಯವಿದೆ.