ಬೆಳಗಾವಿ: ಯಡಿಯೂರಪ್ಪ ಸಿಎಂ ಆಗಿದ್ದಾಗ ಡಿಸೆಂಬರ್‌ಗೆ ಇಳಿಯುತ್ತಾರೆ ಎಂದಿದ್ದೆ, ಈಗ ಬೊಮ್ಮಾಯಿ ಅವರು ಜನವರಿಗೆ ಇಳಿಯುತ್ತಾರೆ ಎಂದು ಹೇಳಿದ್ದೇನೆ. ನಮ್ಮ ಭವಿಷ್ಯ ಸುಳ್ಳಾಗುವುದಿಲ್ಲ ಎಂದು ಕಾಂಗ್ರೆಸ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು ಹೇಳಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಗಾಗಲೇ ಮೇಲ್ನೋಟಕ್ಕೆ ಎರಡು ಮೂರು ಹೆಸರು ಕೇಳಿ ಬರುತ್ತಿವೆ. ಬೊಮ್ಮಾಯಿ ಅವರ ಕಾಲು ಚೆನ್ನಾಗಿತ್ತು. ಕೆಲಸ ಮಾಡಿ ಕುಂಟುವಂತಾಗಿದೆ. ಮುಂಬಯಿಗೆ 12 ಜನರನ್ನು ಕರೆದುಕೊಂಡು ಹೋಗಿ ವೀಡಿಯೋ ಮಾಡಿಕೊಂಡು ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದಾರೆ.
ಬಸವರಾಜ ಬೊಮ್ಮಾಯಿ ಮೂಲಕ ಮತಾಂತರ, ಲವ್ ಜಿಹಾದ್ ಬಿಲ್‌ಗಳನ್ನು ಪಾಸ್ ಮಾಡಿಸಿಕೊಂಡು ಮನೆಗೆ ಕಳುಹಿಸುತ್ತಾರೆ. ಅವರು ಕೇಶವ ಕೃಪಾದವರ ಮಾತು ಕೇಳದೆ ಬಸವ ತಣ್ತೀ ಅನುಸರಿಸಿದರೆ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ ಎಂದರು.
ಬದಲಾವಣೆ ಇಲ್ಲ: ಯತ್ನಾಳ್
ಮುಖ್ಯಮಂತ್ರಿ ಬದಲಾವಣೆ ವಿಚಾರ ಇದೀಗ ಚರ್ಚೆಯಲ್ಲಿಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.