Breaking News

ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಕ್ರೈಸ್ತರ ಹೊಸ ವರ್ಷ ಆಚರಣೆ ಮಾಡಬಾರದು.: ಪ್ರಮೋದ್​ ಮುತಾಲಿಕ್​

Spread the love

ಹುಬ್ಬಳ್ಳಿ: ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಕ್ರೈಸ್ತರ ಹೊಸ ವರ್ಷ ಆಚರಣೆ ಮಾಡಬಾರದು. ಒಂದು ವೇಳೆ ಮಾಡಿದ್ರೆ ಧರಣಿ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಎಚ್ಚರಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್​ ಮುತಾಲಿಕ್​, ಹಿಂದುಗಳಿಗೆ ಯುಗಾದಿಯಂದು ಹೊಸ ವರ್ಷ ಆರಂಭವಾಗುತ್ತದೆ.

ಹಾಗಾಗಿ ಕ್ರೈಸ್ತರ ಹೊಸ ವರ್ಷಾಚರಣೆ ಮಾಡದಂತೆ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಮತ್ತು ಆರ್ಟ್​ ಆಫ್​ ಲಿವಿಂಗ್​ನ ರವಿಶಂಕರ ಗುರೂಜಿ ಹಾಗೂ ಇಸ್ಕಾನ್​ನ ಮಧುದಾಸ ಪಂಡಿತ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದರು.

ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಕ್ರೈಸ್ತರ ಹೊಸ ವರ್ಷಾಚರಣೆ ಮಾಡಬಾರದು. ಬೆಂಗಳೂರಿನ ಇಸ್ಕಾನ್​, ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಆಶ್ರಮ (ಆರ್ಟ್​ ಆಫ್​ ಲೀವಿಂಗ್​) ಹಾಗೂ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಡಿ. 31 ರಂದು ಹೊಸ ವರ್ಷಾಚರಣೆ ಕಾರ್ಯಕ್ರಮ ಆಯೋಜಿಸಿದರೆ ಈ ಮೂರು ಸ್ಥಳಗಳಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಮುತಾಲಿಕ್​ ಎಚ್ಚರಿಸಿದರು.


Spread the love

About Laxminews 24x7

Check Also

ನಿಯಮ ಉಲ್ಲಂಘಿಸಿ ಶಾಸಕ ವೀರೇಂದ್ರ ಬಂಧನ-ವಕೀಲರ ವಾದ: ವಿಚಾರಣೆ ಮುಂದೂಡಿಕೆ

Spread the love ಬೆಂಗಳೂರು: ಆನ್​ಲೈನ್​ ಮತ್ತು ಆಫ್​ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಸಮನ್ಸ್ ಜಾರಿಗೊಳಿಸದೆ, ನಿಯಮಗಳನ್ನು ಉಲ್ಲಂಘಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ