ಚೆನ್ನೈ: ಕುಡಿದ ಮತ್ತಿನಲ್ಲಿ ಗಣಿತ ಶಿಕ್ಷಕನೊಬ್ಬ ರಾತ್ರಿ ವೇಳೆ ಪೋರ್ನ್ ವಿಡಿಯೋ ಒಂದನ್ನು ವಾಟ್ಸ್‌ಆಯಪ್ ಗ್ರೂಪ್‌ಗಳಿಗೆ ಕಳುಹಿಸಿದ್ದಾರೆ. ಈ ವಿಡಿಯೋ ಆನ್‌ಲೈನ್ ಕ್ಲಾಸ್‌ಗಾಗಿ ವಿದ್ಯಾರ್ಥಿಗಳು ಇರುವ ಗ್ರೂಪ್‌ಗಳಿಗೂ ಹೋಗಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು ದಂಗಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಅಂಬತ್ತೂರಿನ ಮತ್ತಿವನನ್ ಎಂಬಾತ ಅಶ್ಲೀಲ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಗ್ರೂಪ್‌ನಲ್ಲಿ ಕೆಲವು ಇವರ ಕ್ಲಾಸ್‌ನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು. ಬೆಳಗ್ಗೆ ಆನ್‌ಲೈನ್ ಕ್ಲಾಸ್‌ಗಾಗಿ ಮೊಬೈಲ್ ನೋಡಿದಾಗ ವಿದ್ಯಾರ್ಥಿಗಳು ದಂಗಾಗಿ ಹೋಗಿದ್ದಾರೆ.
ಕೂಡಲೇ ಅವರು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದರು. ಬಳಿಕ ಶಿಕ್ಷಕ ಅಂಬತ್ತೂರಿನ ಮತ್ತಿವನನ್ ಅವರನ್ನು ಮಂಡಳಿಯವರು ಕರೆದು ತನಿಖೆ ನಡೆಸಿದೆ. ಮದ್ಯ ಸೇವನೆಯ ಅಮಲಿನಲ್ಲಿ ವಿಡಿಯೋ ಈ ಗ್ರೂಪ್‌ಗೂ ಶೇರ್ ಆಗಿದೆ ಎಂದು ಶಿಕ್ಷಕ ಹೇಳಿಕೆ ನೀಡಿದ್ದಾರೆ. ಸದ್ಯ ಪೊಲೀಸರು ಮತ್ತಿವನನ್‍ನನ್ನು ಪೋಕ್ಸೊ ಮತ್ತು ಐಟಿ ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದಾರೆ.
 Laxmi News 24×7
Laxmi News 24×7
				 
		 
						
					 
						
					 
						
					