Breaking News

ಜೈಲಿಗಲ್ಲ ನೇಣಿಗೆ ಹಾಕಿದರೂ #MES ವಿರುದ್ಧ ನಮ್ಮ ಹೋರಾಟ ನಿಲ್ಲದು.  ಸಂಪತಕುಮಾರ್ ದೇಸಾಯಿ ಮತ್ತು ಪದಾಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲ..

Spread the love

ಬೆಳಗಾವಿ – ನಾಡದ್ರೋಹಿ ಎಮ್‌ಇಎಸ್‌ ಮುಖಂಡ ದೀಪಕ್ ದಳವಿ ಮತ್ತಿತರರ ಮುಖಕ್ಕೆ ಮಸಿ ಬಳಿದ ಪ್ರಕರಣದಲ್ಲಿ ಬಂಧಿಸಿರುವ ಕರ್ನಾಟಕ ನವನಿರ್ಮಾಣ ಸೇನೆ ಬೆಳಗಾವಿ ಜಿಲ್ಲಾ ಯುವ ಘಟಕ ಅಧ್ಯಕ್ಷ ಸಂಪತಕುಮಾರ್ ದೇಸಾಯಿ ಮತ್ತು ಪದಾಧಿಕಾರಿಗಳ ಮೇಲೆ ಕೊಲೆ ಯತ್ನ (ಸೆಕ್ಷನ್ 307) ಪ್ರಕರಣ ದಾಖಲಿಸಲಾಗಿದೆ!
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿರುವ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾ ಶಂಕರ ಪಾಟೀಲ ,  ಕರ್ನಾಟಕ ನವನಿರ್ಮಾಣ ಸೇನೆ ಬೆಳಗಾವಿ ಜಿಲ್ಲಾ ಯುವ ಘಟಕ ಅಧ್ಯಕ್ಷ ಸಂಪತಕುಮಾರ್ ದೇಸಾಯಿ ಮತ್ತು ಪದಾಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿರುವ ಸರಕಾರದ ಕ್ರಮ ಖಂಡನಿಯ ಎಂದಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಕರ್ನಾಟಕ ಸರ್ಕಾರ ವಿಧಾನಮಂಡಲ ಅಧಿವೇಶನ ನಡೆಸುತ್ತಿರುವ ಸಂದರ್ಭದಲ್ಲಿ ಸರ್ಕಾರಕ್ಕೆ ಸವಾಲೊಡ್ಡಿ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ಮಹಾಮೇಳಾವ್ ಆಚರಿಸುತ್ತಿರುವ ಕ್ರಮವನ್ನು ವಿರೋಧಿಸಿ ಮಸಿ ಬಳೆದು ಪ್ರತಿಭಟಿಸಿರುವ ಸೇನೆಯ ಸಂಪತಕುಮಾರ ದೇಸಾಯಿಯವರ ನಡೆ ಸ್ವಾಭಿಮಾನಿ ಕನ್ನಡಿರೆಲ್ಲರೂ ಮೆಚ್ಚುವಂತದ್ದು ಇದನ್ನು ಕರ್ನಾಟಕ ನವನಿರ್ಮಾಣ ಸೇನೆ ಸಮರ್ಥಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಭಾಷಾ ಭಯೋತ್ಪಾದಕ ಸಂಘಟನೆಯಾದ ಎಮ್.ಇ.ಎಸ್.ನ್ನು ಬುಡ ಸಮೇತ ಬೆಳಗಾವಿ ನೆಲದಿಂದ ಕಿತ್ತೊಗೆಯುವ ಕೆಲಸ ಮಾಡಬೇಕಿತ್ತು ಆದರೆ ಆ ಕೆಲಸ ಮಾಡದೆ ಕನ್ನಡಕ್ಕಾಗಿ ಹೋರಾಡಿದ ಸೇನೆಯ ಕಾರ್ಯಕರ್ತರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಿರುವುದು ನಿಜಕ್ಕೂ ನಾಚಿಕೆಗೆಡಿತನ ಸರಕಾರಕ್ಕೆ ಕನ್ನಡಿಗರ ಬಗ್ಗೆ ಸ್ವಾಭಿಮಾನವಿದ್ದರೆ ೬ ಕೋಟಿ ಕನ್ನಡಿಗರು ಮೆಚ್ಚುವಂತಹ ಕೆಲಸ ಮಾಡಿರುವ ಕರ್ನಾಟಕ ನವನಿರ್ಮಾಣ ಸೇನೆಯ ಬೆಳಗಾವಿ ಯುವ ಘಟಕದ ಅಧ್ಯಕ್ಷ ಸಂಪತಕುಮಾರ್ ದೇಸಾಯಿ ಮತ್ತು ಪದಾಧಿಕಾರಿಗಳ ಮೇಲೆ ದಾಖಲಿಸಿರುವ ಕೊಲೆ ಪ್ರಕರಣವನ್ನು ಕೈಬಿಟ್ಟು ಬೆಷರತ್ತಾಗಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಭೀಮಾ ಶಂಕರ ಪಾಟೀಲ ಆಗ್ರಹಿಸಿದ್ದಾರೆ.
ಸರಕಾರದ ಈ ನಡೆ ನಿಜಕ್ಕೂ ಕನ್ನಡಿಗರನ್ನು ತಲೆತಗ್ಗಿಸುವಂತಿದೆ.ಮರಾಠಿ ಮತ ಬ್ಯಾಂಕ್ ಗಾಗಿ ಕನ್ನಡಿಗರನ್ನು #MES ನವರಿಗೆ ಅಡವಿಡುವ ಕೆಲಸ ಸರಕಾರ ಮಾಡುತ್ತಿದೆ ಇದನ್ನು ವಿರೋಧಿಸಿ ಸೇನೆ ನಿರಂತರವಾಗಿ ಹೋರಾಟ ಮಾಡುತ್ತದೆ,ಸರಕಾರದ ಇಂಥಹ ಗೊಡ್ಡ ಬೆದರಿಕೆಗಳಿಗೆ ಸೇನೆಯ ಕಾರ್ಯಕರ್ತರು ಬಗ್ಗಲಾರರು ನಮ್ಮನ್ನು ಜೈಲಿಗಲ್ಲ ನೇಣಿಗೆ ಹಾಕಿದರೂ #MES ವಿರುದ್ಧ ನಮ್ಮ ಹೋರಾಟ ನಿಲ್ಲದು. ಒಂದು ವೇಳೆ ಬಿಡುಗಡೆ ಮಾಡದೇ ಹೋದರೆ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾದ್ಯಂತ ಬಿದಿಗಿಳಿದು ಪ್ರತಿಭಟಿಸಲಿದೆ ಎಂದು ಈ ಮೂಲಕ ಎಚ್ಚರಿಸಿದ್ದಾರೆ.

Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ