ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದರು. ಆಗ ನಾವೇನಾದರೂ ಮಾತನಾಡಿದ್ವಾ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮತಾಂತರ ನಿಷೇಧ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿ.ಎಂ.ಇಬ್ರಾಹಿA ಮತಾಂತರವನ್ನು ಯಾರೂ ಬಲವಂತವಾಗಿ ಮಾಡಬಾರದು. ಸ್ವಯಿಚ್ಚೆಯಿಂದ ಬೇಕಾದರೆ ಮತಾಂತರವಾಗಲಿ. ಎಷ್ಟೋ ಜನ ಮುಸ್ಲಿಮರು ಲಿಂಗಾಯತರಾದರು. ಆಗ ನಾವೇನಾದರೂ ಮಾತಾಡಿದ್ದೇವಾ..? ರಿಜ್ವಿ ಹಿಂದೂ ಆದ, ನಾವು ಏನಾದರೂ ಹೇಳಿದ್ವಾ..? ಮತಾಂತರ ಅವರವರ ಇಚ್ಛೆ. ಅದಕ್ಕಾಗಿ ಒಂದು ಮಸೂದೆ ತರುವ ನಾಟಕ ಎಲ್ಲ ಯಾಕೆ ಎಂದು ಪ್ರಶ್ನಿಸಿದರು.
ಗೂಳಿಹಟ್ಟಿ ಶೇಖರ್ ತಾಯಿ ಮತಾಂತರ ಆಗಿದ್ದ ಬಗ್ಗೆ ಪ್ರತಿಕ್ರಯಿಸಿದ ಸಿಎಂ ಇಬ್ರಾಹಿಂ ಅಂತಹ ಕೇಸ್ ಇದ್ರೆ ಕ್ರಮ ತಗೊಳ್ಳಲಿ. ಅವರ ತಾಯಿ ದೂರು ಕೊಟ್ರೆ ತನಿಖೆ ಮಾಡಲಿ. ಯಾರು ಬೇಡ ಅಂತಾರೆ..? ದೇಶದಲ್ಲಿ ಸಾಕಷ್ಟು ಸಮಸ್ಯೆ ಇದೆ. ಊಟದ ಸಮಸ್ಯೆ, ಕೋವಿಡ್ ಸಮಸ್ಯೆ ಇದೆ. ಹುಚ್ಮುಂಡೆ ಮದುವೇಲಿ ವಾಲಗದೋರು ಬಡಿದಿದ್ರು ಅನ್ನೋ ಹಾಗಾಯ್ತು ಈ ಬಿಜೆಪಿ ಸರ್ಕಾರ ಹೇಳುವುದು. ತಿನ್ನೋಕ್ಕೆ ಅನ್ನ ಇಲ್ಲ, ನಿರುದ್ಯೋಗ ಸಮಸ್ಯೆ ಇದೆ, ರೈತರ ಸಮಸ್ಯೆ ಇದೆ. ಈ ಕುರಿತು ಸರ್ಕಾರ ಮಾತಾಡಬೇಕು. ಮತಾಂತರ ಸರ್ಕಾರದ ಸಮಸ್ಯೆ ಅಲ್ಲ ಎಂದು ಕಿಡಿಕಾರಿದರು