ಮೊಟ್ಟೆ ನೀಡುವ ವಿಚಾರದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಯಾಗ್ತಿದೆ, ಯಾರಿಗೆ ಬೇಕು ತಗೊಳ್ಳಿ. ಬೇಡವಾದವರಿಗೆ ಹಣ್ಣು ತಗೊಳ್ಳಿ ಆಯ್ತು ಎಂದಿದ್ದಾರೆ. ಈ ವಿಚಾರವನ್ನ ಆದಷ್ಟು ಬೇಗನೇ ಸರ್ಕಾರ ಬಗೆಹರಿಸಬೇಕು ಬಹಳ ದಿನ ಈ ಗೊಂದಲವನ್ನ ಸರ್ಕಾರ ಮುಂದುವರೆಸಬಾರದು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿವಿಮಾತು ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು ಜಾತಿ, ಕೋಮು ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತೆ, ಶಿಕ್ಷಣ ಮಂತ್ರಿಗಳು ಬೇಗ ಡಿಶಿಜನ್ ತಗೊಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮೊಟ್ಟೆ ಬೇಕಾದ್ರೆ ಮೊಟ್ಟೆ ತಗೊಳ್ಳಿ, ಬೇಡವಾದವ್ರು ಹಣ್ಣು-ಹಾಲು ತಗೊಳ್ಳಿ ಅಂದ್ರೆ ವಿವಾದ ಮುಗಿದೆ ಹೋಗುತ್ತೆ, ಶಾಖಾಹಾರಿಗಳಿಗೆ ಮೊಟ್ಟೆ, ಮಾಂಸ, ಕೋಳಿ ಕೊಡ್ತೀನಿ ಅಂದ್ರೆ ಸಹಜವಾಗಿ ವಿರೋಧ ವ್ಯಕ್ತವಾಗುತೆ. ಆ ವಿರೋಧಕ್ಕೆ ಕಾರಣವಾದ ಸರ್ಕಾರ, ಶಿಕ್ಷಣ ಮಂತ್ರಿಗಳು ಪರಿಹಾರ ಮಾಡಬೇಕು ಇಲ್ಲಿ ಮೀನಾ-ಮೇಷ ಎನಿಸಿದ್ರೆ ವಿವಾದ ಉಲ್ಬಣವಾಗುತ್ತೆ ಎಂದರು.