ಸಂತೆಯೊಂದರಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಸಾರ್ವಜನಿಕರೇ ಹಿಡಿದು ಪೆÇಲೀಸರಿಗೆ ಒಪ್ಪಿಸಿದ ಘಟನೆ ಕಾಗವಾಡ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾಗವಾಡ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗಿದೆ. ಐನಾಪುರ ಪಟ್ಟಣದ ವಾರದ ಸಂತೆಯಲ್ಲಿ ಮೊಬೈಲ್ ಕಳ್ಳರು ತಮ್ಮ ಕೈಚಳಕ ತೋರುತ್ತಿದ್ದ ವೇಳೆ, ಸಾರ್ವಜನಿಕರು ಮೊಬೈಲ್ ಕಳ್ಳನನ್ನು ಹಿಡಿದು ಪೆÇಲೀಸರಿಗೆ ಒಪ್ಪಿಸಿದ್ದಾರೆ.
ಶನಿವಾರರಂದು ವಾರದ ಸಂತೆಗಾಗಿ ಆಗಮಿಸಿರುವ ಸಾರ್ವಜನಿಕರು ತರಕಾರಿ ಖರಿದಿಯಲ್ಲಿ ತೊಡಗಿದ್ದಾಗ ಮುವರು ಯುವಕರು ಮೊಬೈಲ್ ಕಳ್ಳತನಕ್ಕೆ ಕೈ ಹಾಕಿದ್ದರು. ಸಂತೆಯಲ್ಲಿ ತರಕಾರಿ ಖರಿದಿಯಲ್ಲಿ ಮಗ್ನವಾಗಿರುವಾಗ ಕಾತ್ರಾಳ ಗ್ರಾಮದ ಸಂಜಯ ಮುಧವಿ ಎಂಬಾತನ ಮೊಬೈಲ್‍ನ್ನು ಜೇಬಿನಿಂದ ತೆಗೆದುಕೊಳ್ಳುವಾಗ ಸಾರ್ವಜನಿಕರು ಕಳ್ಳನನ್ನು ಹಿಡಿದಿದ್ದಾರೆ. ಇನ್ನು ಕಳ್ಳ ಅಲ್ಲೆ ಕಿರಿಚಾಡುತ್ತಿದ್ದಂತೆ ಇನ್ನಿಬ್ಬರು ಕಳ್ಳರು ಓಡಿ ಹೋಗಿದ್ದಾರೆ.