ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಶುಕ್ರವಾರ (ಡಿ 10) ಚುನಾವಣೆ ನಡೆದಿದೆ. ಡಿಸೆಂಬರ್ ಹದಿನಾಲ್ಕರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಜೆಡಿಎಸ್ ಆರು ಸ್ಥಾನದಲ್ಲಿ ಸ್ಪರ್ಧಿಸಿದರೆ, ಎರಡು ರಾಷ್ಟ್ರೀಯ ಪಕ್ಷಗಳು ಎಲ್ಲಾ ಕ್ಷೇತ್ರದಲ್ಲಿ ಕಣಕ್ಕಿಳಿದಿದೆ.
ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧಿಸಿರುವುದರಿಂದ, ಇದರ ಇಂಪ್ಯಾಕ್ಟ್ ಯಾರ ಮೇಲೆ ಬೀಳಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪನವರಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ
ಇನ್ನು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕೂಡಾ ಬಿರುಸಿನ ಪ್ರಚಾರವನ್ನು ನಡೆಸಿದ್ದರು. ಆಡಳಿತ ಸ್ಥಾನದಲ್ಲಿ ಇರುವುದರಿಂದ, ಬಿಜೆಪಿ ಪರಿಷತ್ತಿನಲ್ಲಿ ತನ್ನ ಸ್ಥಾನವನ್ನು ವೃದ್ದಿಸಿಕೊಳ್ಳುವತ್ತ ಭರ್ಜರಿ ಪ್ರಚಾರವನ್ನೇ ನಡೆಸಿತ್ತು.
ಈ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗಬಹುದು ಎನ್ನುವ ನಿಟ್ಟಿನಲ್ಲಿ ಗುಪ್ತಚರ ಇಲಾಖೆಯು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಾಹಿತಿಯನ್ನು ನೀಡಿದೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಿಜೆಪಿಗೆ ಖುಷಿ ಕೊಡುವ ವಿಚಾರ ಎಂದೂ ಹೇಳಲಾಗುತ್ತಿದೆ.
ವಿಧಾನ ಪರಿಷತ್ತಿನ ಹಾಲೀ ಬಲಾಬಲ, ಬಿಜೆಪಿ 32, ಕಾಂಗ್ರೆಸ್ 29, ಜೆಡಿಎಸ್ 12ವಿಧಾನ ಪರಿಷತ್ತಿನ ಹಾಲೀ ಬಲಾಬಲ, ಬಿಜೆಪಿ 32, ಕಾಂಗ್ರೆಸ್ 29, ಜೆಡಿಎಸ್ 12. ಈ ಬಾರಿಯ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ಮತದಾನವಾಗಿದೆ. ಎಲ್ಲೋ ಬೆರಳೆಣಿಕೆಷ್ಟು ಮತದಾರರು ಮಾತ್ರ ಮತದಾನದಿಂದ ದೂರವುಳಿದಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿ ಶೇ. 99ಕ್ಕೂ ಹೆಚ್ಚು ಮತದಾನವಾಗಿರುವುದು ವಿಶೇಷ. ಬೆಳಗಾವಿಯಲ್ಲಿ ಗರಿಷ್ಠ ಶೇ. 99.98 ಮತದಾನವಾಗಿದ್ದರೆ, ವಿಜಯಪುರದಲ್ಲಿ ಕನಿಷ್ಠ ಶೆ. 99.55 ಮತದಾನವಾಗಿದೆ.
ಚುನಾವಣೆಯಲ್ಲಿ ಬಿಜೆಪಿ ಪರ ವಾತಾವರಣವಿದೆ
ಚುನಾವಣಾ ಫಲಿತಾಂಶದ ಬಗ್ಗೆ ಶಿಗ್ಗಾವಿಯಲ್ಲಿ ಮಾಧ್ಯಮವದವರೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಚುನಾವಣೆಯಲ್ಲಿ ಬಿಜೆಪಿ ಪರ ವಾತಾವರಣವಿದೆ, ಎಲ್ಲಾ ಚೆನ್ನಾಗಿದೆ. ಎಷ್ಟು ಕಡೆ ಸ್ಪರ್ಧೆ ಮಾಡಿದ್ದೇವೋ, ಅಲ್ಲೆಲ್ಲಾ ವಿಜಯ ಸಾಧಿಸುತ್ತೇವೆ. ಹೀಗೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ನಮ್ಮವರು ಕೊಟ್ಟ ಮಾಹಿತಿಯ ಪ್ರಕಾರ ಎಲ್ಲಾ ಕಡೆ ಚೆನ್ನಾಗಿದೆ” ಎಂದು ಮುಖ್ಯಮಂತ್ರಿಗಳು ವಿಶ್ವಾಸದ ಮಾತನ್ನಾಡಿದ್ದಾರೆ.
ಉತ್ತಮ ಫಲಿತಾಂಶವಂತೂ ಬರಲಿದೆ ಬಸವರಾಜ ಬೊಮ್ಮಾಯಿ
“ಒಂದೊಂದು ಚುನಾವಣೆ ಅದರದ್ದೇ ಆದಂತಹ ಮಹತ್ವನ್ನು ಹೊಂದಿದೆ, ಅದೇ ರೀತಿ ವಿಧಾನ ಪರಿಷತ್ ಚುನಾವಣೆ. ಇಷ್ಟೇ ಸ್ಥಾನದಲ್ಲಿ ಗೆಲ್ಲುತ್ತೇವೆ ಎಂದು ಖಚಿತವಾಗಿ ಈಗ ಹೇಳಲು ಸಾಧ್ಯವಿಲ್ಲದಿದ್ದರೂ, ಬಿಜೆಪಿಗೆ ಉತ್ತಮ ಫಲಿತಾಂಶವಂತೂ ಬರಲಿದೆ” ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆ ಮೂಲಕ, ಎಷ್ಟು ಸ್ಥಾನದಲ್ಲಿ ಬಿಜೆಪಿ ಖಚಿತವಾಗಿ ಗೆಲ್ಲಬಹುದು ಎಂದು ಮುಖ್ಯಮಂತ್ರಿಗಳು ಹೇಳಲಿಲ್ಲ.
ವಿಧಾನ ಪರಿಷತ್ ಚುನಾವಣೆ, ಬಿಜೆಪಿಗೆ ಎಷ್ಟು ಸ್ಥಾನ? ಗುಪ್ತಚರ ಮಾಹಿತಿ
“ಡಿಸೆಂಬರ್ ಹದಿಮೂರರಿಂದ ಹತ್ತು ದಿನಗಳ ಕಾಲ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಗೆ ಬರಲಿದೆ ಮತ್ತು ಕ್ಯಾಬಿನೆಟ್ ಮೀಟಿಂಗ್ ನಡೆಯುವ ಬಗ್ಗೆ ಚರ್ಚೆಗಳು ನಡೆದಿದೆ. ಈ ಭಾಗದ ಸಮಸ್ಯೆಗಳು ಈ ಅಧಿವೇಶನದಲ್ಲಿ ಹೆಚ್ಚಾಗಿ ಚರ್ಚೆಗೆ ಬರಲಿದೆ ಎನ್ನುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಹೇಳಿದ್ದಾರೆ.
ಚುನಾವಣೆ ನಡೆದ 25 ಸ್ಥಾನಗಳ ಪೈಕಿ ಬಿಜೆಪಿಗೆ 13ರಿಂದ 15 ಸ್ಥಾನಗಳು ಬರಬಹುದು. ಕಾಂಗ್ರೆಸ್ 10ರಿಂದ 12 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಇನ್ನು ಜೆಡಿಎಸ್ ಒಂದೆರಡು ಸ್ಥಾನಗಳಿಗೆ ಸೀಮಿತವಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.