Breaking News

ವಯಸ್ಸು 30 ದಾಟಿದ ಬಳಿಕ ನೀವು ಸೇವಿಸಲೇಬೇಕು ಈ ಆಹಾರ ಪದಾರ್ಥ

Spread the love

ಮೂವತ್ತು ವರ್ಷ ದಾಟಿತು ಅಂದಕೂಡಲೇ ದೇಹ ದುರ್ಬಲವಾಗುತ್ತಾ ಬರುತ್ತದೆ. ಹೀಗಾಗಿ ಮೂವತ್ತರ ಬಳಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂದರೆ ಕಿತ್ತಳೆ, ದ್ರಾಕ್ಷಿ ಹಾಗೂ ಲಿಂಬುವನ್ನು ಸೇವಿಸಬೇಕು. ಸಿಟ್ರಸ್​ ಹೆಚ್ಚಿರುವ ಹಣ್ಣುಗಳಲ್ಲಿ ಆಯಂಟಿ ಆಕ್ಸಿಡಂಟ್​ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.

ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇಂತಹ ಹಣ್ಣುಗಳನ್ನು ಸೇವಿಸಿದ ಬಳಿಕ ತೂಕ ಇಳಿಕೆಯಾಗುತ್ತದೆ ಹಾಗೂ ಹೃದಯಾಘಾತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಬೊಕ್ರೊಲಿಯಲ್ಲಿ ಅಗಾಧ ಪ್ರಮಾಣದಲ್ಲಿ ವಿಟಮಿನ್​ ಇರುತ್ತದೆ. ಇದು ನಿಮ್ಮ ದೇಹದ ಮೂಳೆಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಅಲ್ಲದೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ರೋಗದ ವಿರುದ್ಧ ಹೋರಾಡಲು ಅನುಕೂಲಕಾರಿ.

 ಬೆಳ್ಳುಳ್ಳಿ ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ. ಹಾಗೂ ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ.

 ಮೀನೆಣ್ಣೆ ಕೂಡ ಆರೋಗ್ಯಕ್ಕೆ ಅತ್ಯಂತ ಉಪಕಾರಿ. ಇದು ದೇಹಕ್ಕೆ ಅವಶ್ಯವಾದ ಹಾರ್ಮೋನ್​ಗಳನ್ನು ಉತ್ಪತ್ತಿ ಮಾಡುವಲ್ಲಿ ಸಹಕಾರಿ. ಹೃದಯ ಹಾಗೂ ಮೆದುಳಿನ ಆರೋಗ್ಯಕ್ಕೆ ಕೂಡ ಮೀನೆಣ್ಣೆ ಉತ್ತಮ ಪ್ರಯೋಜನ ನೀಡಬಲ್ಲದು. ಮೀನೆಣ್ಣೆಯಲ್ಲಿ ಒಮೆಗಾ 3 ಅಗಾಧ ಪ್ರಮಾಣದಲ್ಲಿದೆ.

 ಡ್ರೈಫ್ರೂಟ್ಸ್​​ಗಳು ತೂಕ ಇಳಿಕೆ ಮಾಡುವಲ್ಲಿ ಸಹಕಾರಿಯಾಗಿರೋದ್ರಿಂದ ನೀವು ಇದನ್ನು ಸ್ನ್ಯಾಕ್​ ರೂಪದಲ್ಲಿ ಸೇವನೆ ಮಾಡಬಹುದು. ಡ್ರೈಫ್ರೂಟ್ಸ್​​​ಗಳಲ್ಲಿ ಪ್ರೋಟಿನ್​​ ಅಧಿಕ ಪ್ರಮಾಣದಲ್ಲಿದೆ.

 ಆರ್ಯುವೇದದಲ್ಲಿ ಜೇನುತುಪ್ಪ ತುಂಬಾನೇ ಮಹತ್ವವಿದೆ. ಕಳೆದ 5000 ವರ್ಷಗಳಿಂದಲೂ ಔಷಧಿಯ ರೂಪದಲ್ಲಿ ಜೇನುತುಪ್ಪ ಬಳಕೆ ಮಾಡಲಾಗುತ್ತಿದೆ. ಅನೇಕ ಸಮಸ್ಯೆಗಳಿಗೆ ಜೇನುತುಪ್ಪ ರಾಮಬಾಣವಾಗಿದೆ.

ಆಂಟಿಸೆಪ್ಟಿಕ್​, ಆಂಟಿಆಕ್ಸಿಡಂಟ್​ ಹಾಗೂ ಆಂಟಿ ಬ್ಯಾಕ್ಟೀರಿಯಲ್​ ಗುಣಗಳು ಈ ಜೇನುತುಪ್ಪದಲ್ಲಿದೆ. ಅನೇಕರು ಸೌಂದರ್ಯವರ್ಧಕವಾಗಿ ಬಳಕೆ ಮಾಡುತ್ತಾರೆ.

ಚಿಯಾ ಬೀಜಗಳು ಅಗಾಧ ಪ್ರಮಾಣದಲ್ಲಿ ಫೈಬರ್​, ಒಮೆಗಾ 3 ಫ್ಯಾಟಿ ಆಯಸಿಡ್​ ಹಾಗೂ ಮ್ಯಾಗ್ನೆಷಿಯಂ ಇದೆ. ಚಿಯಾ ಬೀಜಗಳನ್ನು ಸೇವನೆ ಮಾಡುವುದರಿಂದ ನಿಮಗೆ ಹೊಟ್ಟೆ ತುಂಬಿದಂತೆ ಎನಿಸಲಿದೆ. ಹಾಗೂ ಕೇಶವರ್ಧನೆಗೂ ಸಹಕಾರಿ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ