ಬೆಳಗಾವಿ ಜಿಲ್ಲೆಯಲ್ಲಿ ಎರಡು ಪರಿಷತ್ ಸ್ಥಳೀಯ ಸಂಸ್ಥೆಗಳ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮತದಾನ ನಡೆದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಎರಡು ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಮತದಾನಕ್ಕೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ ಮತದಾರರು ಉತ್ತಮ ಪ್ರತಿಕ್ರಿಯೆ ನೀಡಿದ್ದು ಪ್ರತಿಶತ 99.97ರಷ್ಟು ಮತದಾನ ನಡೆದಿದೆ.
ಜಿಲ್ಲೆಯ ಸವದತ್ತಿ, ಖಾನಾಪುರ, ಕಿತ್ತೂರ್, ಬೈಲಹೊಂಗಲ, ರಾಯಬಾಗ್, ಹುಕ್ಕೇರಿ, ಮೂಡಲಗಿ, ಗೋಕಾಕ್, ನಿಪ್ಪಾಣಿ, ಚಿಕ್ಕೋಡಿ,ಕಾಗವಾಡ ತಾಲೂಕುಗಳಲ್ಲಿ ಶೇ 100ರಷ್ಟು ಮತದಾನ ನಡೆದಿದೆ. ಇನ್ನುಳಿದಂತೆ ಅಥಣಿ 99.87, ಬೆಳಗಾವಿ ತಾಲೂಕು 99.91 ಹಾಗೂ ರಾಮದುರ್ಗ್ ತಾಲೂಕಿನಲ್ಲಿ 99.83 ರಷ್ಟು ಮತದಾನ ನಡೆದಿದೆ. ಒಟ್ಟಾರೆ ಮತದಾನ 99.97 ರಷ್ಟು ನಡೆದಿದೆ.
ಜಿಲ್ಲೆಯಲ್ಲಿ ಒಟ್ಟು 8849 ಮತದಾರರ ಪೈಕಿ 8846 ಜನ ಮತ ಚಲಾಯಿಸಿದ್ದಾರೆ. 4211 ಪುರುಷ ಮತದಾರರಿದ್ದು 4209ಜನ ಮತದಾನ ಮಾಡಿದ್ದಾರೆ. ಒಟ್ಟು 4638 ಮಹಿಳಾ ಮತದಾರರ ಪೈಕಿ 4637 ಮಹಿಳೆಯರು ಮತದಾನ ಮಾಡಿದ್ದಾರೆ.