Breaking News

ಈ ಚುನಾವಣೆಯಲ್ಲಿ ಬಿಜೆಪಿ 15 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಲಿದೆ:ಪ್ರಹ್ಲಾದ್ ಜೋಶಿ

Spread the love

ರಾಜ್ಯಾದ್ಯಂತ ಪರಿಷತ್ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ 15 ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯ ಹಾಗೂ ಬಿಜೆಪಿ ಸಂಘಟನೆಯಿಂದ ದೊಡ್ಡ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದೆ.ಪ್ರದೀಪ್ ಶೆಟ್ಟರ್ ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ದೇಶದೆಲ್ಲೆಡೆ ಬಿಜೆಪಿ ಪರ ಅಲೆಯಿದೆ. ಉತ್ತರಪ್ರದೇಶ. ಉತ್ತರಖಾಂಡದಲ್ಲಿ ನಮ್ಮ ಪರ ಅಲೆಯಿದೆ. ಪಂಜಾಬನಲ್ಲಿ ಹೊಸ ಪ್ರಯೋಗ ಮಾಡುತ್ತಿದ್ದೇವೆ. ಬಿಜೆಪಿ ಮತ್ತೊಮ್ಮೆ ಪಾರುಪತ್ಯ ಸಾಧಿಸಲಿದೆ ಎಂದರು.

ಪರಿಷತ್ ಚುನಾವಣೆಯಲ್ಲಿ ಹಣ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಗಂಭೀರವಾದ ಚಿಂತನೆ ಅಗಬೇಕಿದೆ. ಹಣ ಹಂಚಿಕೆ ಇದೇ ರೀತಿ ಮುಂದುವರಿದ್ರೆ ಪರಿಷತ್ ಬೇಕೋ ಬೇಡ್ವೋ ಅನ್ನೋ ಚರ್ಚೆ ಆಗಬೇಕಾಗುತ್ತದೆ.
ಎಲ್ಲ ಪಕ್ಷಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ಹಣ ಹಂಚಿಕೆ ಆರೋಪ ದೊಡ್ಡ ಪ್ರಮಾಣದಲ್ಲಿ ಕೇಳಿ ಬಂದಿದೆ ವಿಧಾನಪರಿಷತ್ ಬೇಡ ಬೇಕೋ ಅನ್ನೋ ಬಗ್ಗೆ ಎಲ್ಲ ಪಕ್ಷಗಳು ಚಿಂತನೆ ಮಾಡಬೇಕಿದೆ. ಇದೊಂದು ಗಂಭೀರವಾದ ವಿಷಯವಾಗಿದೆ. ಲಂಚ ಕೊಟ್ಟು ಆರಿಸಿ ಬರುತ್ತಿದ್ದಾರೆ. ಎಲ್ಲ ಪಕ್ಷಗಳ ಪ್ರಮುಖರು. ಸಿಎಂ ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕಿದೆ.ಸಾರ್ವತ್ರಿಕ ಚುನಾವಣೆಗಿಂತ ಪರಿಷತ್ ಚುನಾವಣೆಯಲ್ಲಿ ಹೆಚ್ಚು ಖರ್ಚು ಅಗುತ್ತಿದೆ. ಹಣ ತಗೆದುಕೊಂಡು ಮತ ಹಾಕಿದ ಮೇಲೆ ಕೆಲಸ ಮಾಡಕೊಡಲು ಆಗುವುದಿಲ್ಲ ಎಂದರು.

ಮಹದಾಯಿ ವಿಚಾರ ನ್ಯಾಯಾಲಯದಲ್ಲಿದೆ.‌ ಕರ್ನಾಟಕ ಗೋವಾ ನ್ಯಾಯಾಲಯದಲ್ಲಿ
ಪ್ರಶ್ನೆ ಮಾಡಿವೆ. ಕರ್ನಾಟಕ ಎಲ್ಲ ರೀತಿಯ ಸಿದ್ದತೆಯಲ್ಲಿದೆ. ಕಾಮಗಾರಿ ಆರಂಭಿಸಲು ಹಣ ಸಹ ತಗೆದಿರಿಸಲಾಗಿದೆ.
ಹುಬ್ಬಳ್ಳಿ ಅಂಕೋಲ ರೈಲ್ವೆ ಯೋಜನೆ ವಿಚಾರದಲ್ಲಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ನಾನು ಸಿಎಂ ಜೊತೆ ಸಹ ಮಾತನಾಡಿದ್ದೇನೆ. ದೌಭಾಗ್ಯ ಅಂದ್ರೆ ಕೆಲವರು ವನ್ಯಜೀವಿ ಹೆಸರಿನಲ್ಲಿ ನ್ಯಾಯಾಲಯಕ್ಕೆ ಹೋಗುತ್ತಿದ್ದಾರೆ. ನಮ್ಮಗೂ ಅರಣ್ಯ. ವನ್ಯಜೀವಿ ಮೇಲೆ ಕಾಳಜಿ ಇದೆ. ಇಲ್ಲಿಂದ ಒಂದು ರೈಲು ಸಂಪರ್ಕ ಮಾಡಿದ್ರೆ. ಉತ್ತರ ಕರ್ನಾಟಕದ ಭಾಗ್ಯದ ಬಾಗಿಲು ತೆರಲಿದೆ. ಮಂಗಳೂರು ಅಭಿವೃದ್ಧಿ ಹೊಂದಲು ಅಲ್ಲಿನ ಬಂದರು ಪ್ರಮುಖ ಪಾತ್ರ ವಹಿಸಿದೆ. ಹುಬ್ಬಳ್ಳಿಯಲ್ಲಿ ಕೈಗಾರಿಕೋದ್ಯಮಿಗಳಿಗೆ ಹೂಡಿಕೆ ಮಾಡಿ ಅಂದ್ರೆ ನಿಮ್ಮಲ್ಲಿ ಬಂದರು ಇಲ್ಲ ಅಂತಾರೆ. ಪರಿಸರವಾದಿಗಳು ಸರ್ಕಾರ ಜೊತೆ ಕೂತೂ ಮಾತನಾಡಲಿ. ಹಠಮಾರಿತನ ಮಾಡೋದು ಸರಿ ಅಲ್ಲ.
ಕಡಿಮೆ ಹಾನಿ ಆಗುವಂತೆ ನೋಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ ಎಂದರು.

ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರದ
ಬಗ್ಗೆ ನನಗೆ ಮಾಹಿತಿ ಇಲ್ಲ. ರಾಜ್ಯಾಧ್ಯಕ್ಷರ ಜೊತೆ ಮಾತನಾಡುವೆ ಎಂದರು.


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ