ಬೆಳಗಾವಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದು ಹುಕ್ಕೇರಿಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅದ್ಯಕ್ಷ ಶಾನೂಲ ತಹಸಿಲ್ದಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹುಕ್ಕೆರಿಯಲ್ಲಿ ಪರಿಷತ್ ಚುನಾವಣೆಗೆ ನಡೆದ ಮತದಾನದ ವೇಳೆ ಮುಂಜಾನೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಯಾವೊಬ್ಬ ಸದಸ್ಯರೂ ಮತದಾನ ಕೇಂದ್ರದತ್ತ ಸುಳಿಯಲಿಲ್ಲ, ಹುಕ್ಕೇರಿ ತಾಲೂಕಿನ ಗ್ರಾಮ ಪಂಚಾಯತಿಗಳಾದ ಎಲಿಮುನ್ನೋಳ್ಳಿ, ಗುಡಸ, ಅಮ್ಮಣಗಿ, ನೆರಲಿ, ಬಡಕುಂದ್ರಿ ಗ್ರಾಮಗಳಲ್ಲಿ ಮತದಾನ ಕೇಂದ್ರಗಳಲ್ಲಿ ಅಧಿಕಾರಿಗಳು ಮಾತ್ರ ಕಂಡುಬಂದರು. ಕಾಂಗ್ರೆಸ್ ಮತ್ತು ಭಾರತಿಯ ಜನತಾ ಪಕ್ಷದ ಸದಸ್ಯರು ಅಲ್ಲಲ್ಲಿ ಗುಂಪು ಗುಂಪಾಗಿ ಗುಸು ಗುಸು ಮಾತನಾಡುವ ದೃಶ್ಯಗಳು ಕಂಡು ಬಂದವು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಜು ಶಿದ್ನಾಳ ಮಾತನಾಡಿ, ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ಸದಸ್ಯರು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಯವರ ಗೆಲುವಿಗೆ ಒಲವು ತೋರಿಸಿದ್ದಾರೆ, ಶಾಸಕಿ ಲಕ್ಷ್ಮಿ ಹೇಬ್ಬಾಳಕರ್ ಒಳ್ಳೆಯ ಕಾರ್ಯ ಮಾಡಿದ್ದಾರೆ. ಸತೀಶ ಜಾರಕಿಹೋಳಿಯವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್
ಈ ಸಂದರ್ಭದಲ್ಲಿ ಬೆಳಗಾವಿಯಿಂದ ವಿಕ್ಷಕರಾಗಿ ವಿನೋದ ನಾಯಿಕ, ರಾಜಶ್ರೀ ನಾಯಿಕ, ಪ್ರಕಾಶ ನಾಯಿಕ, ಭಾರತಿ ಧಾನವಾಡೆ ಭೇಟಿ ನೀಡಿದರು.