Breaking News

ಹೆದ್ದಾರಿ ದಾಟುತ್ತಿದೆ ದೈತ್ಯ ಅನಕೊಂಡ, ಉಸಿರು ಬಿಗಿ ಹಿಡಿದುಕೊಳ್ಳುವಂಥ ವಿಡಿಯೋ

Spread the love

ನವದೆಹಲಿ : ನೀವು ವಾಹನದಲ್ಲಿ ಕುಳಿತು ಆರಾಮವಾಗಿ, ಪ್ರಯಾಣಿಸುತ್ತಿರುವಾಗ ಎದುರಿಗೆ ಸುಮಾರು 25 ಅಡಿ ಉದ್ದದ ದೈತ್ಯ ಹಾವು (Snake video) ಬಂದರೆ? ಕೈ ಕಾಲು ನಡುಗಿ ಹೋಗುತ್ತದೆ. ಎದೆ ಜೋರಾಗಿ ಹೊಡೆದುಕೊಳ್ಳುತ್ತದೆ. ಏನು ಮಾಡಬೇಕು ಎನ್ನುವುದು ಕೂಡಾ ತೋಚುವುದಿಲ್ಲ.

ಘಟನೆಯನ್ನು ನೆನೆಸಿದ ಮಾತ್ರಕ್ಕೆ ಭಯ ವರಿಸಿಕೊಳ್ಳುತ್ತದೆ. ಆದರೆ ಇಂಥಹ ಘಟನೆ ನಿಜವಾಗಿಯೂ ನಡೆದಿದೆ. ಹೌದು ಹೆದ್ದಾರಿಯಲ್ಲಿ ದೈತ್ಯ ಹಾವು ಹರಿದಾಡುವ ವಿಡಿಯೋವೊಂದು ವೈರಲ್ (Viral video) ಆಗುತ್ತಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದ (Social media) ವಿವಿಧ ವೇದಿಕೆಗಳಲ್ಲಿ ಶೇರ್ ಮಾಡಲಾಗಿದೆ. ಹಾಗೆಯೇ ಈ ವಿಡಿಯೋಗೆ ಭಾರೀ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿದೆ.

ಸುಮಾರು 25 ಅಡಿ ಉದ್ದದ ದೈತ್ಯ ಹಾವು (Snake video) ಹೆದ್ದಾರಿಗೆ ಬಂದು ರಸ್ತೆ ದಾಟುತ್ತಿದೆ. ಇದರ ಮಧ್ಯೆ, ಹೆದ್ದಾರಿಯಲ್ಲಿ ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿರುವುದನ್ನು ಕೂಡಾ ಕಾಣಬಹುದು. ಈ ಕೆಲ ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗುತ್ತಿದೆ.

ಹೆದ್ದಾರಿಯಲ್ಲಿ ಹಾವು ಏಕಾಏಕಿ ಬರುತ್ತಿರುವುದನ್ನು ಕಾಣಬಹುದು. ಈ ಹಾವನ್ನು ಕಂಡು, ವಾಹನ ಚಲಾಯಿಸುತ್ತಿದ್ದವರೂ ಗಾಬರಿಗೊಂಡು ಕಾರನ್ನು ಸುರಕ್ಷಿತ ದೂರದಲ್ಲಿ ನಿಲ್ಲಿಸುವುದನ್ನು ನೋಡಬಹುದು. ಇನ್ನು ಕೆಲವರು, ಹಾವಿಗೆ ಏನೂ ತೊಂದರೆ ಆಗದಂತೆ, ಸುರಕ್ಷಿತವಾಗಿ ರಸ್ತೆ ದಾಟುವಂತೆ ಇತರ ವಾಹನಗಳನ್ನು ನಿಲ್ಲಿಸುತ್ತಾರೆ. ಇನ್ನು ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ (Mobile) ಸೆರೆಹಿಡಿಯುವುದನ್ನು ಕಾಣಬಹುದು. ಇದೀಗ ಭಾರೀ ವೈರಲ್ (Viral video)ಆಗಿದೆ.

 

ಸ್ನೇಕ್.ವೈಲ್ಡ್ ಎಂಬ ಹೆಸರಿನ ಪೇಜ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ (instagram) ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ಯಾವಾಗ ಸೆರೆ ಹಿಡಿಯಲಾಗಿದೆ ಮತ್ತು ಇದು ಎಲ್ಲಿಯ video ಎನ್ನುವುದು ತಿಳಿದು ಬಂದಿಲ್ಲ.


Spread the love

About Laxminews 24x7

Check Also

ನಿಧಿಯಾಸೆಗೆ ದೇವರ ಕಲ್ಲನ್ನು ಕೆಡವಿದ್ದ ಕಳ್ಳರನ್ನು ಬಂಧಿಸಿದ ಪೊಲೀಸರು: ಮೂಕಪ್ಪಸ್ವಾಮಿ ಪವಾಡ ಎಂದ ಗ್ರಾಮಸ್ಥರು

Spread the loveಹಾವೇರಿ: 4 ತಿಂಗಳ ಹಿಂದೆ ನಿಧಿ ಆಸೆಗಾಗಿ ಕೋಣಕಲ್ಲು ಭರಮಪ್ಪ ದೇವರ ಕಲ್ಲನ್ನು ಕೆಡವಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ