ಆದ್ರೆ ಅದೇನಾಯ್ತೊ ಗೊತ್ತಿಲ್ಲ ನಿನ್ನೆ ಕೆಲ್ಸಾ ಮುಗಿಸಿ ಮನೆಗೆ ಹೋಗೊದಾಗಿ ಹೇಳಿ ಅಲ್ಲಿಂದ ಬಂದಿದ್ದ. ಆದ್ರೆ ಮಾರ್ಗಮಧ್ಯದಲ್ಲಿ ತನ್ನೂರಿಗೆ ಬರೋದನ್ನ ಬಿಟ್ಟು ಕಮಲಾಪುರ್ ಕಡೆ ಹೋದವನು ದೂರದ ತೊಗರಿ ಹೊಲದಲ್ಲಿ ಹಣವಾಗಿ ಬಿದ್ದಿದ್ದ.
ಅರೆ ಬೆತ್ತಲಾಗಿ ಬಿದ್ದಿರೋ ಮೃತದೇಹ… ಏನಾಗಿದೆ ಅಂತ ನಿಂತು ನೋಡ್ತಿರೋ ಜನ… ದುಡಿಯೋ ಮಗ ಹೀಗೆ ಕೊಲೆಯಾಗಿ ಹೋದನಲ್ಲಾ ಅಂತ ರೋಧಿಸುತ್ತಿರೋ ಕುಟುಂಬಸ್ಥರು… ಸ್ಥಳ ಭೇಟಿ ನೀಡಿ ಪರಿಶೀಲನೆ ಮಾಡ್ತಿರೋ ಹಿರಿಯ ಪೊಲೀಸ್ ಅಧಿಕಾರಿ… ಈ ದೃಶ್ಯ ಕಂಡು ಬಂದಿದ್ದು ಕಲಬುರ್ಗಿಯ ಕಮಲಾಪುರ್ ತಾಲೂಕಿನ ನಾವದಗಿ ಗ್ರಾಮದ ಹೊರ ವಲಯದಲ್ಲಿ. ಈತನ ಹೆಸರು ಸಿದ್ದಪ್ಪ ಸಿಂಗೆ ಅಂತ. ಕಮಲಾಪುರ ತಾಲೂಕಿನ ಬೆಳಕೋಟಾ ಗ್ರಾಮದ ನಿವಾಸಿ…
ಸಿದ್ದಪ್ಪ ಕಳೆದ ಎರಡು ವರ್ಷಗಳ ಹಿಂದೆ ದುಬೈ ನಿಂದ ತನ್ನ ಗ್ರಾಮಕ್ಕೆ ಬಂದಿದ್ದ ಮನೆಯಲ್ಲಿ ಕಡು ಬಡತನ ಹೀಗಾಗಿ ಹೊಟ್ಟೆ ತುಂಬಿಸಿಕೊಳ್ಳಲು ದೂರದ ದುಬೈಗೆ ಹೋಗಿ ಅಲ್ಲಿ ಕೆಲ್ಸಾ ಮಾಡ್ತಿದ್ದ. ಆದ್ರೆ ಅದ್ಯಾವಾಗ ವಿಶ್ವಕ್ಕೆ ಕರೋನಾ ಮಹಾ ಮಾರಿ ಎಂಟ್ರಿ ಆಯ್ತು ಅವಾಗ ತನ್ನೂರಿಗೆ ಎರಡು ವರ್ಷಗಳ ಹಿಂದೆ ವಾಪಸ್ ಬಂದಿದ್ದ. ಇಲ್ಲಿ ಬಂದು ಏನು ಮಾಡೋದು ಅಂತ ಕೆಲ ದಿನ ಅಲ್ಲಿ ಇಲ್ಲಿ ಕೂಲಿ ಮಾಡ್ಕೊಂಡು ಜೀವ್ನ ಸಾಗಿಸುತ್ತಿದ್ದ. ಅದೆ ವೇಳೆ ನವನಿಹಾಳ್ ಬಳಿ ಇರೋ ಪುಟ್ಟಪರ್ತಿಯ ಸತ್ಯ ಸಾಯಿ ವಿವಿಯಲ್ಲಿ ಲ್ಯಾಬ್ ಟೆಕ್ನೀಷನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ.
ಹೀಗೆ ದಿನ ನಿತ್ಯ ತನ್ನೂರಿನಿಂದ ವಿವಿಗೆ ಹೋಗಿ ಕೆಲ್ಸಾ ಮಾಡಿ ಮನೆಗೆ ಬರ್ತಿದ್ದ. ಆದ್ರೆ ನಿನ್ನೆ ಕೆಲ್ಸಾ ಮುಗಿಸಿ ಮನೆಗೆ ಬರೋದಕ್ಕೆ ತಡವಾಗಿದಕ್ಕೆ ಮಗ ಮನೆಗೆ ಬಂದಿಲ್ಲ ಅಂತ ಫೋನ್ ಮಾಡಿದ್ದಾರೆ. ನಾನು ಇಲ್ಲೇ ಕಮಲಾಪುರದಲ್ಲಿ ಇದ್ದೀನಿ. ಸ್ವಲ್ಪ ಹೊತ್ತು ಬಿಟ್ಟು ಮನೆಗೆ ಬರ್ತಿನಿ ಅಂತ ಹೇಳಿದ್ದಾನೆ. ಆದ್ರೆ ತಡವಾದರೂ ಇನ್ನೂ ಯಾಕೆ ಮನೆಗೆ ಬಂದಿಲ್ಲ ಅಂತ ಫೋನ್ ಮಾಡಿದ್ರೆ ಫೋನ್ ಸ್ವಿಚ್ ಆಫ್ ಬಂದಿದೆ ಇನ್ನೇನು ಬರಬಹುದು ಅಂತ ಮನೆಯವರು ಕೂಡಾ ಸುಮ್ಮನಾಗಿದ್ರು. ಆದ್ರೆ ಅದ್ಯಾವಾಗ ಮಧ್ಯ ರಾತ್ರಿ ಆದ್ರು ಮನೆಗೆ ಬಂದಿಲ್ಲ ಅಂತ ಸಹೋದರರು ಹುಡುಕಾಡಲು ಶುರು ಮಾಡಿದ್ದಾರೆ. ಆದ್ರೆ ಆತನ ಸುಳಿವು ಮಾತ್ರ ಮನೆಯವರಿಗೆ ಸಿಕ್ಕಿರಲಿಲ್ಲ.
: ಕೈ ಅಭ್ಯರ್ಥಿ ಅನಿಲ್ ಕುಮಾರ್ ಸೋಲಿಗೆ ಕಾಂಗ್ರೆಸ್ನವರಿಂದಲೇ ತಂತ್ರ: ಕೊತ್ತೂರು ಮಂಜುನಾಥ್
ಆತ ದುಬೈ ಹೋಗಿ ವಾಪಸ್ ಬಂದ್ರು ಆತ ಗರ್ವ ಇಲ್ಲದೆ ಎಲ್ಲರೊಂದಿಗೆ ಗ್ರಾಮದಲ್ಲಿ ಚೆನ್ನಾಗಿಯೆ ಇದ್ದ. ಎಲ್ಲರನ್ನು ಗೌರವದಿಂದಲೆ ಮಾತನಾಡ್ತಿದ್ದ. ಹಾಗಾಗಿ ಎಲ್ಲರೂ ಗ್ರಾಮದಲ್ಲಿ ಏನೇ ಹೇಳಿದ್ರು ನಯವಾಗಿಯೇ ಮಾತನಾಡ್ತಿದ್ದ. ಗ್ರಾಮದಲ್ಲಿ ಯಾರೊಂದಿಗೂ ಜಗಳ ಮಾಡಿದವನಲ್ಲ. ಹಾಗಾಗಿ ಆತನ ಎಲ್ಲರು ಆತನ ಒಳ್ಳೆಯ ವ್ಯಕ್ತಿ ಅಂತನೆ ಹೇಳ್ತಾರೆ. ಯಾರೊಂದಿಗೂ ದ್ವೇಷ ಇಲ್ಲದ ವ್ಯಕ್ತಿಗೆ ಈ ರೀತಿ ಕೊಲೆ ಮಾಡಿದ್ದಾರೆ ಅಂದ್ರೆ ಇದಕ್ಕೆ ಬೇರೇನೂ ಕಾರಣ ಇರಬಹುದು ಅನ್ನೋದ ಮೇಲ್ನೋಟಕ್ಕೆ ಕಂಡು ಬರ್ತಿದೆ.
ಅಲ್ಲದೆ ಇಡೀ ರಾತ್ರಿ ಮನೆಯವರು ಹುಡುಕಿದ್ರು ಸಿಕ್ಕಿಲ್ಲ. ಮತ್ತೆ ಬೆಳಗ್ಗೆ ಎದ್ದು ಮನೆಯವರು ಹುಡುಕಿದ್ದಾರೆ. ಕಮಲಾಪುರ ತಾಲೂಕಿನ ನಾವದಗಿ ಗ್ರಾಮ ಆತನ ಮಾವನ ಮನೆ ಆಗಿದ್ರಿಂದ ಅಲ್ಲಿಗೇನಾದ್ರು ಹೋಗಿದ್ದಾನಾ ಅಂತ ನೋಡ್ತಾ ಬರುವಾಗ ರಸ್ತೆ ಪಕ್ಕದಲ್ಲಿ ಆತನ ಬೈಕ್ ಕಂಡುಬಂದಿದೆ. ಹಾಗಾಗಿ ಅಲ್ಲೆ ಸುತ್ತ ಮುತ್ತ ಹುಡುಕಿದಾಗ ತೊಗರಿ ಹೊಲದಲ್ಲಿ ಮರದ ಪಕ್ಕದಲ್ಲಿ ನೇಣು ಬಿದ್ದಿದ್ದ ಸ್ಥಿತಿಯಲ್ಲಿ ಶವ ಕಂಡು ಇದು ಸಿದ್ದಪ್ಪನದೆ ಮೃತ ದೇಹ ಅಂತ ಗುರುತಿಸಿದ್ದಾರೆ. ನಂತ್ರ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರು ಕೂಡಾ ಸ್ಥಳಕ್ಕೆ ಪರಿಶೀಲನೆ ನಡಿಸಿದ್ದಾರೆ.
ಬೆತ್ತಲೆ ದೇಹ; ಅನೈತಿಕ ಸಂಬಂಧಕ್ಕೆ ಕೊಲೆಯಾದನಾ?
ನಿನ್ನೆ ಕೆಲಸ ಮುಗಿಸಿ ಮನೆಗೆ ಹೋಗ್ತೆನೆ ಅಂದವನು ಕಮಲಾಪುರಕ್ಕೆ ಹೋಗಿದ್ದಾನೆ ಅನ್ನೋದು ಅನುಮಾನ ಕಾಡ್ತಿದೆ. ಆತ ತನ್ನ ಬೈಕ್ ಅನ್ನ ನಾವದಗಿ ಗ್ರಾಮದ ಹೊರ ವಲಯದಲ್ಲಿ ಇರೋ ತೊಗರಿ ಹೊಲದ ಬಳಿ ತನ್ನ ಟಿವಿಎಸ್ ಬೈಕ್ ಪಾರ್ಕ್ ಮಾಡಿ ತೊಗರಿ ಹೊಲದಲ್ಲಿ ಆತನ ವಿವಸ್ತ್ರವಾಗಿ ಬಿದ್ದಾದ್ದಾನೆ ಅಂದ್ರೆ ಆತನಿಗೆ ಅನೈತಿಕ ಸಂಬಂಧ ಇರಬಹುದು ಅಂತ ಅನುಮಾನ ವ್ಯಕ್ತವಾಗಿದೆ.
: ಶಾಲೆಯ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ ಪಾಪಿಗಳು.. ಕೊನೆ ಕ್ಷಣದಲ್ಲಿ ದುರಂತ ತಪ್ಪಿದ್ದೇ ಪವಾಡ!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ, ಸಿದ್ದಪ್ಪ ಅನ್ನೋ ಯುವಕನ ಶವ ಪತ್ತೆ ಆಗಿದೆ. ಆತನ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗಲಾಟೆಯಾಗಿದೆ ಅನ್ನೋ ಮಾಹಿತಿ ಇದೆ. ಮತ್ತು ಈ ರೀತಿ ವಿವಸ್ತ್ರ ಸ್ಥಿತಿಯಲ್ಲಿ ಮೃತ ದೇಹ ಸಿಕ್ಕಿಂದ್ರಿಂದ ಅನೈತಿಕ ಸಂಬಂಧ ಸಲುವಾಗಿ ಕೊಲೆ ಆಗಿದೆಯೇ ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಅಂತಾರೆ.
ಅದೇನೆ ಇರಲಿ, ತಾನಾಯ್ತು ತನ್ನ ಕೆಲ್ಸಾ ಆಯ್ತು ಅಂತ ಇದ್ದಿದ್ದರೆ ಇವತ್ತು ಆತನಿಗೆ ಈ ಸ್ಥಿತಿ ಬರ್ತಾ ಇರ್ಲಿಲ್ಲ. ಮದುವೆಯಾಗಿ ಮೂರು ಮಕ್ಕಳು ಇದ್ದರೂ ಅನ್ಯ ಹೆಣ್ಣಿನ ಹಿಂದೆ ಬಿದ್ದು ಈಗ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕಮಲಾಪುರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.