12ರ ಬಾಲಕಿಯೊಬ್ಬಳು 14 ವರ್ಷದ ಬಾಲಕನೊಬ್ಬನಿಂದ ಗರ್ಭಿಣಿಯಾಗಿರುವ ಘಟನೆ ಹಾಸನದ ಹೊಳೆನರಸೀಪುರದಲ್ಲಿ ತಡವಾಗಿ ಬೆಳೆಕಿಗೆ ಬಂದಿದೆ. 6ನೇ ತರಗತಿ ಓದುತ್ತಿರುವ ಬಾಲಕಿಗೆ ಮನೆ ಸಮೀಪವೇ ಇದ್ದ ಕೂಲಿ ಕಾರ್ಮಿಕನ 14 ವರ್ಷದ ಪುತ್ರನ ಜತೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ.
ಈಚೆಗೆ ತೀವ್ರ ವಾಂತಿಯಾಗಿ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಗರ್ಭಿಣಿಯಾಗಿರುವುದು ದೃಢವಾಗಿದೆ.
ಇದರಿಂದ ಕಂಗಾಲಾದ ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ. ಈ ವೇಳೆ ಸಂತ್ರಸ್ತ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾಲಕ ಪದೇ ಪದೆ ಮನೆಗೆ ಬಂದು ಕೆಟ್ಟದಾಗಿ ವರ್ತಿಸುತ್ತಿದ್ದ, ವಿರೋಧಿಸಿದರೆ ಬೆದರಿಕೆ ಒಡ್ಡುತ್ತಿದ್ದು, ತಂದೆ ತಾಯಿಗೆ ವಿಚಾರ ತಿಳಿಸಲು ಹೆದರಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಪೋಕ್ಸೋ ಕಾಯ್ದೆಯಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7