ಮೈಸೂರು : ಕೊರೊನಾ ಸೋಂಕಿನಿಂದ (Corona infection) ಮೃತಪಟ್ಟವರ ಡಿಸಿಸಿ ಬ್ಯಾಂಕ್ (DCC Bank) ಸಾಲ ಮನ್ನಾ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ (Minister S.T. Somashekhar) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳಲ್ಲಿ ಸಾಲ ಪಡೆದವರು ಕೋವಿಡ್ ನಿಂದ ಮೃತಪಟ್ಟಿದ್ದರೆ ಅವರ ಸಾಲ ಮನ್ನಾ ಮಾಡಲಾಗಿದೆ.
ಇದನ್ನು ಮೀರಿ ಯಾವುದಾದರೂ ಬ್ಯಾಂಕ್ ನೋಟಿಸ್ ನೀಡಿದ್ದರೆ ಬ್ಯಾಂಕ್ ನವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.