ಮಾನವ ಬಂಧುತ್ವ ವೇದಿಕೆ ಬೆಳಗಾವಿಯ ವತಿಯಿಂದ ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್‍ರ 65ನೇ ಮಹಾಪರಿನಿರ್ವಾಣ ದಿನವನ್ನು ಆಚರಣಾ ಮಾಡಲಾಯಿತು.
ಬೆಳಗಾವಿಯ ಸದಾಶಿವ ನಗರದ ಬೌದ್ಧವಿಹಾರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್‍ರವರ 65ನೇ ಮಹಾಪರಿನಿರ್ವಾಣ ದಿನದ ಪ್ರಯುಕ್ತ ಮೌಢ್ಯ ವಿರೋದಿ,ü ಪರಿವರ್ತನಾ ದಿನ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ರವೀಂದ್ರ ನಾಯ್ಕರ್, ಸಮಾಜಿಕ, ಧಾರ್ಮಿಕ, ಮೂಢನಂಬಿಕೆಗಳ ಆಚರಣೆ ಮತ್ತು ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ಸದಸ್ಯರು ಹಾಗೂ ಇನ್ನಿತತರು ಉಪಸ್ಥಿತರಿದ್ದರು.