Breaking News

ಕೇರಳದ 27 ವರ್ಷದ ಮಾಡೆಲ್ ಮೇಲೆ ಗ್ಯಾಂಗ್ ರೇಪ್, ಘಟನೆಗೂ ಮುನ್ನ ಹೋಟೆಲ್ ನಲ್ಲಿ ನಡೀತು ಈ ಕೃತ್ಯ

Spread the love

ಕೊಚ್ಚಿಯಲ್ಲಿ (Kochi News) ರೂಪದರ್ಶಿಯೋಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು, ಇದೀಗ ಪ್ರಕರಣ ಭಾರಿ ಸಂಚಲನ ಮೂಡಿಸಿದೆ. 27 ವರ್ಷದ ವೃತ್ತಿಪರ ಮಾಡೆಲ್ ತನ್ನ ಮೇಲೆ ನಡೆದ ಅತ್ಯಾಚಾರದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳೆಯ ದೂರಿನ ಪ್ರಕಾರ, ಕಾಕನಾಡಿನ ಎಡಚಿರದಲ್ಲಿರುವ ಹೋಟೆಲ್‌ನಲ್ಲಿ ಮೂವರು ವ್ಯಕ್ತಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಸಾಮೂಹಿಕ ಅತ್ಯಾಚಾರದ ವಿಡಿಯೋ
ಈ ಮಾಡೆಲ್ ತನ್ನ ಎಫ್‌ಐಆರ್‌ನಲ್ಲಿ ಆರೋಪಿ ತನ್ನ ಪಾನೀಯದಲ್ಲಿ ಏನನ್ನಾದರೂ ಬೆರೆಸಿ ನಂತರ ಕೋಣೆಗೆ ಬೀಗ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎಂದು ಬರೆದಿದ್ದಾಳೆ. ಈ ವೇಳೆ ಆರೋಪಿಗಳು ಆಕೆಯ ಹಲವು ವಿಡಿಯೋಗಳನ್ನು ಮಾಡಿ ದೂರು ನೀಡಿದರೆ ಅಥವಾ ಕೇಳದಿದ್ದರೆ ಶೇರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ.

ಮಲಪ್ಪುರಂನಿಂದ ಕೊಚ್ಚಿಗೆ ಕರೆಯಿಸಿಕೊಳ್ಳಲಾಗಿದೆ
ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಕೇರಳದ ಮಲಪ್ಪುರಂ ನಿವಾಸಿಯಾಗಿದ್ದಾಳೆ (Malappuram Model). ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಆರೋಪಿಗಳ ಹೇಳಿಕೆಯ ಮೇರೆಗೆ ಆಕೆ ಕೊಚ್ಚಿ ತಲುಪಿದ್ದಳು ಎನ್ನಲಾಗಿದೆ.

ಸಾಮೂಹಿಕ ಅತ್ಯಾಚಾರ ಎಸಗಿದ ಮೂವರು ಆರೋಪಿಗಳು ರೂಪದರ್ಶಿಗೆ ಪರಿಚಿತರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 1 ಮತ್ತು 2 ರಂದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎನ್ನಲಾಗಿದೆ. ಸಲಿನ್ ಎಂಬ ಆರೋಪಿಯ ಕರೆಯ ಮೇರೆಗೆ ಆಕೆಯನ್ನು ಈ ಹೋಟೆಲ್‌ಗೆ ಕರೆಸಲಾಗಿತ್ತು.

 

ಒಬ್ಬ ಆರೋಪಿ ಬಂಧನ, ಇಬ್ಬರು ತಲೆಮರೆಸಿಕೊಂಡಿದ್ದಾರೆ
ರೂಪದರ್ಶಿಯ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಐಒ (IO) ಪ್ರಕಾರ, ಅವರು ಸಂತ್ರಸ್ತ ಮಹಿಳೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಮೂಲಕ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಹೋಟೆಲ್ ಮಾಲೀಕ ಹಾಗೂ ಮ್ಯಾನೇಜರ್‌ನನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ-PM Modi-Putin Summit Today: ಪ್ರಧಾನಿ ಮೋದಿ-ಪುಟಿನ್ ಶೃಂಗಸಭೆಯತ್ತ ಎಲ್ಲರ ಚಿತ್ತ

ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು ಪ್ರಸ್ತುತ ಶಮೀರ್ ಮತ್ತು ಅಜ್ಮಲ್ ಹೆಸರಿನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.


Spread the love

About Laxminews 24x7

Check Also

ಖಾಸಗಿ ಲಾಡ್ಜ್​​ನಲ್ಲಿ ಪಿಎಸ್​ಐ ಆತ್ಮಹತ್ಯೆ

Spread the love ತುಮಕೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪೊಲೀಸ್​​ ಸಬ್ ಇನ್ಸ್​ಪೆಕ್ಟರ್​​ವೊಬ್ಬರು ನಗರದ ಖಾಸಗಿ ಲಾಡ್ಜ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ